×
Ad

ದೇಶಾದ್ಯಂತ 12 ಸಾವಿರ ಚಿಕುನ್‌ಗುನ್ಯಾ ಪ್ರಕರಣ: ವರದಿ

Update: 2016-09-14 18:29 IST

ಹೊಸದಿಲ್ಲಿ, ಸೆ.14: ಮಾರಕ ಚಿಕುನ್‌ಗುನ್ಯಾ ದಿಲ್ಲಿ ಹಾಗೂ ದೇಶದ ಇತರ ಕೆಲವುನಗರಗಲ್ಲಿ ಜೀವ ಬಲಿಗಳನ್ನು ಪಡೆಯುತ್ತಿದೆ. ದಿಲ್ಲಿಯಲ್ಲಿ ಮಂಗಳವಾರ ಒಂದು ಸಾವು ವರದಿಯಾಗುವುದರೊಂದಿಗೆ ಕಳೆದೆರಡು ದಿನಗಳಲ್ಲಿ ಕನಿಷ್ಠ 5 ಸಾವುಗಳು ಅಲ್ಲಿಂದ ವರದಿಯಾಗಿವೆ. ದಿಲ್ಲಿಯಲ್ಲಿ ಚಿಕುನ್‌ಗುನ್ಯಾ ಪ್ರಕರಣಗಳ ಸಂಖ್ಯೆ ಒಂದು ಸಾವಿರಕ್ಕೂ ಮೀರಿದೆ.


ಮಥುರಾದ 75ರ ಹರೆಯದ ಪ್ರಕಾಶ್ ಕಲ್ರಾ ಎಂಬವರು ಬುಧವಾರ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಇದೇ ಆಸ್ಪತ್ರೆಯಲ್ಲಿ ಇತರ ಮೂವರು ವೃದ್ಧರು ಸಾವನ್ನಪ್ಪಿದ್ದರು.


ಕಲ್ರಾರನ್ನು ಕಾಯಿಲೆ ತೀವ್ರಗೊಂಡ ಬಳಿಕ ಆಸ್ಪತ್ರೆಗೆ ತರಲಾಗಿತ್ತು. ಅವರ ಮೂತ್ರಪಿಂಡ ವಿಫಲವಾಗಿತ್ತು. ಕಲ್ರಾರನ್ನು ನಿನ್ನೆ ಐಸಿಯುಗೆ ಸೇರಿಸಲಾಗಿತ್ತು. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಅವರಿಗೆ ಚಿಕುನ್‌ಗುನ್ಯಾ ತಗಲಿದ್ದುದು ಖಚಿತವಾಗಿತ್ತೆಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.


ಹಿಂದೂರಾವ್ ಆಸ್ಪತ್ರೆಯಲ್ಲಿ 22ರ ಹರೆಯದ ಯುವತಿಯೊಬ್ಬಳು ಚಿಕುನ್‌ಗುನ್ಯಾದಿಂದ ಮೃತಪಟ್ಟಿದ್ದಾಳೆಂದು ಮಂಗಳವಾರ ವರದಿಯಾಗಿದೆ. ಆಕೆ ಸೆ.1ರಂದು ಕೊನೆಯುಸಿರೆಳೆದಿದ್ದಳೆಂದು ಅಧಿಕಾರಿಗಳು ಹೇಳಿದ್ದಾರೆ.


ರಾಷ್ಟ್ರೀಯ ಜಲಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದನ್ವಯ(ಎನ್‌ವಿಬಿಡಿಸಿಪಿ) ಆ.31ರ ವರೆಗೆ ದೇಶಾದ್ಯಂತ ಸುಮಾರು 12,255 ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 8,941, ಮಹಾರಾಷ್ಟ್ರದಲ್ಲಿ 839 ಹಾಗೂ ಆಂಧ್ರಪ್ರದೇಶದಲ್ಲಿ 492 ಪ್ರಕರಣಗಳಿವೆ.


ಈ ಕ್ಷಣದಲ್ಲಿ ಚಿಕುನ್‌ಗುನ್ಯಾಕ್ಕೆ ಸಂಬಂಧಿಸಿ ‘ಸ್ಫೋಟಕವೆನಿಸುವ’ ಪರಿಸ್ಥಿತಿಯಿದೆಯೆಂದು ಆರೋಗ್ಯ ಸಚಿವಾಲಯದ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಚಿಕುನ್‌ಗುನ್ಯಾದಿಂದ ಸಾವಿನ ಮೊದಲ ದೃಢೀಕೃತ ಪ್ರಕರಣದಲ್ಲಿ ನಿನ್ನೆ 65ರ ಹರೆಯದ ರಮೇಶ್ ಪಾಂಡೆ ಎಂಬವರು ಗಂಗಾರಾಮ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.


ಎಐಐಎಂಎಸ್‌ನಲ್ಲಿ ಸೆ.11ರ ವರೆಗೆ 1,360 ಚಿಕುನ್‌ಗುನ್ಯಾ ರಕ್ತದ ಮಾದರಿಗಳು ಪರೀಕ್ಷೆಯಲ್ಲಿ ಖಚಿತಗೊಂಡಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News