ಲೆಜೆಂಡ್ ಕ್ಲಾಸಿಕ್ಸ್ ತಂಡಕ್ಕೆ ಉಚ್ಚಿಲ ಫುಟ್ಬಾಲ್ ಲೀಗ್ ಪ್ರಶಸ್ತಿ

Update: 2016-09-14 13:30 GMT

ಉಳ್ಳಾಲ, ಸೆ.14: ಸೋಮೇಶ್ವರ ಉಚ್ಚಿಲದ ಉಚ್ಚಿಲ ಫುಟ್ಬಾಲ್ ಫ್ಯಾನ್ಸ್ ವತಿಯಿಂದ ಸೋಮೇಶ್ವರ ಉಚ್ಚಿಲದ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಲೀಗ್ ಪಂದ್ಯಾಟ ಮಂಗಳವಾರ ತೆರೆ ಕಂಡಿದ್ದು ಲೀಗ್ ಪ್ರಶಸ್ತಿಯನ್ನು ಲೆಜೆಂಡ್ ಕ್ಲಾಸಿಕ್ಸ್ ಮುಡಿಗೇರಿಸಿಕೊಂಡರೆ ಟೀಮ್ ಬಿಬಿಜಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಲೆಜೆಂಡ್ ಕ್ಲಾಸಿಕ್ಸ್ ಮತ್ತು ಟೀಮ್ ಬಿಬಿಜಿ ತಂಡವು ಪರಸ್ಪರ ಸೆಣಸಿ ಅಂತಿಮವಾಗಿ ಲೆಜೆಂಡ್ ಕ್ಲಾಸಿಕ್ಸ್ ತಂಡವು ವಿಜಯಶಾಲಿಯಾಯಿತು.

ಹಿರಿಯ ಫುಟ್ಬಾಲ್ ಆಟಗಾರ ಉಮೇಶ್ ಉಚ್ಚಿಲ್ ಕ್ರೀಡಾಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿ, ಫುಟ್ಬಾಲ್ ಆಟವು ಶಿಸ್ತಿನ ಆಟವಾಗಿದ್ದು ಪ್ರತಿ ಆಟಗಾರರು ಮುಂದೆಯೂ ಬದ್ಧತೆಯಿಂದ ಆಟದಲ್ಲಿ ತೊಡಗಿಸಲು ಕರೆ ನೀಡಿದರು.

ಸೋಮೇಶ್ವರ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಮತ್ತು ಅತಿಥಿಗಳು ಸೇರಿ ಫುಟ್ಬಾಲ್ ಆಟಗಾರರಿಗೆ ವೈಯಕ್ತಿಕ ಮತ್ತು ಲೀಗ್ ಪ್ರಶಸ್ತಿಯನ್ನು ಪ್ರದಾನಿಸಿದರು.

ಅಂತರ್ ಶಾಲಾ ಕರಾಟೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಮುಹಮ್ಮದ್ ಫೈಝಲ್ ಉಚ್ಚಿಲ್‌ರನ್ನು ಸನ್ಮಾನಿಸಲಾಯಿತು.

ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ, ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಮೌಸಿನ್ ರೆಹ್ಮಾನ್, ಕಾಂಗ್ರೆಸ್ ಮುಖಂಡ ಯೂಸುಫ್ ಉಚ್ಚಿಲ್, ಇಬ್ರಾಹಿಂ ಯು.ಎನ್, ಬ್ಯಾರೀಸ್ ವೆಲ್‌ಫೇರ್ ಫೋರಂ ಅಬುದಾಬಿ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ರೆಹಮಾನಿಯಾ ಆಂಗ್ಲ ಮಾಧ್ಯಮ ಶಾಲೆ ಉಚ್ಚಿಲದ ಸಂಚಾಲಕ ಅಬ್ದುಸ್ಸಲಾಂ ಜಿ.ಐ., ಮುಹಮ್ಮದ್ ಮೊಯ್ದಿನ್ ಉಚ್ಚಿಲ, ಖಾದರ್ ಹಾಜಿ, ಸಂಯೋಜಕರಾದ ಝಾಹಿದ್, ಕರೀಂ, ಶಮೀರ್, ಆರಿಫ್, ನಾಸಿರ್, ತನ್ವೀರ್, ಯು.ಎನ್. ನವಾಝ್ ಉಚ್ಚಿಲ್, ಉದ್ಯಮಿ ಇಸ್ಮಾಯೀಲ್ ಜೆ., ಅಬ್ಬಾಸ್ ಉಚ್ಚಿಲ್, ನಾಸಿರ್ ಯು.ಎನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News