ಬಸ್‌ನಡಿಗೆ ಬಿದ್ದು ಅಪರಿಚಿತ ಮೃತ್ಯು
Update: 2016-09-14 23:39 IST
ಉಡುಪಿ, ಸೆ.14: ಉಡುಪಿ ಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಟೂರಿಸ್ಟ್ ಬಸ್ಸಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ.13ರಂದು ರಾತ್ರಿ ನಡೆದಿದೆ.
ಬೆಂಗಳೂರು ಮೂಲದ ಶಾರದಾಂಬಾ ಎಂಬ ಹೆಸರಿನ ಟೂರಿಸ್ಟ್ ಬಸ್ಸನ್ನು ಅದರ ಚಾಲಕ ಹಿಂದಕ್ಕೆ ಚಲಾಯಿಸಿದ ಪರಿಣಾಮ ಹಿಂಬದಿಯಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಯು ಬಸ್ಸಿನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ದೂರಲಾಗಿದೆ. ಚಾಲಕನು ಬಸ್ಸನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.