ನಾಪತ್ತೆ
Update: 2016-09-14 23:40 IST
ಕಾರ್ಕಳ, ಸೆ.14: ನಂದಳಿಕೆ ಗ್ರಾಮ ಕೆದಿಂಜೆ ನಿವಾಸಿ ಲಕ್ಷ್ಮಣ ಕೆ.(30) ಎಂಬವರು ಸೆ.12 ರಂದು ಮಂಜರಪಲ್ಕೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.