ಸೆ.17ಕ್ಕೆ ವಿಶ್ವಕರ್ಮ ಜಯಂತಿ
Update: 2016-09-14 23:41 IST
ಉಡುಪಿ, ಸೆ.14: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಶ್ವಕರ್ಮ ಜಯಂತಿ ಕಾರ್ಯಕ್ರಮವು ಸೆ.17ರಂದು ಬೆಳಗ್ಗೆ 11ಕ್ಕೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಬೇಲೂರು ಸಂಸ್ಕೃತ ಅಧ್ಯಾಪಕ ವಿಶ್ವನಾಥ ಬಿ.ಎಲ್. ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.