×
Ad

ಹಿಂದುತ್ವ ಗೂಂಡಾಗಳಿಂದ ಹಲ್ಲೆಗೊಳಗಾದ ಮಡಿಕೇರಿಯ ಬಶೀರ್ ನನ್ನು ಭೇಟಿಯಾದ SDPI ನಿಯೋಗ

Update: 2016-09-15 14:36 IST

ಮಂಗಳೂರು,ಸೆ. 15: ಕೊಂಡಂಗೇರಿ ಬಶೀರ್ ಮತ್ತು ಹಂಸ ರವರು ಕಗ್ಗೋಡ್ಲುವಿನ ಗಣಪತಿಯವರಿಂದ  ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಕೊಂಡಯ್ಯುತ್ತಿರುವಾಗ ವಾಹನವನ್ನು ಅಡ್ಡಗಟ್ಟಿ ಜಾನುವಾರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಿಂದುತ್ವದ 20 ಮಂದಿ ಗೂಂಡಾಗಳು ಪಿಕ್ ಅಪ್ ವಾಹನಕ್ಕೆ  ಗುಂಡಿನ ದಾಳಿ ನಡೆಸಿ, ಅಮಾಯಕರಾದ ಬಶೀರ್ ಹಾಗೂ ಹಂಸ ರವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಈ ಘಟನೆಯನ್ನು  ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ.ಮತ್ತು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಒತ್ತಾಯಿಸಿದ್ದಾರೆ. 

ಹಲ್ಲೆಗೊಳಗಾದ ಬಶೀರ್ ತೀವ್ರ ಅಸ್ವಸ್ಥರಾಗಿದ್ದು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಭೇಟಿಯಾದ SDPI ನಿಯೋಗ ಹಲ್ಲೆಗೊಳಗಾದ ಬಶೀರ್ ನಿಗೆ  ಧೈರ್ಯತುಂಬಿ,ಕಾನೂನು ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ ತಮಗೆ ನ್ಯಾಯ ಸಿಗುವವರೆಗೂ SDPI ನಿಮ್ಮೊಂದಿಗಿದೆ ಎಂದು ಹೇಳಿದರು

ನಿಯೋಗದಲ್ಲಿ SDPI ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಜಿಲ್ಲಾ ಪ್ರ.ಕಾರ್ಯದರ್ಶಿ ನವಾಝ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಆಶ್ರಪ್ ಮಂಚಿ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News