ಸೆ.17ರಂದು ದಕ್ಷಿಣ ಭಾರತದ ಅತಿ ಎತ್ತರದ ವಸತಿ ಸಮುಚ್ಚಯ 'ವೆಸ್ಟ್‌ಲೈನ್ ಸಿಗ್ನೇಚರ್‌'ಗೆ ಶಿಲಾನ್ಯಾಸ

Update: 2016-09-15 12:31 GMT

ಮಂಗಳೂರು, ಸೆ.15: ನಗರದ ನಂತೂರು ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 53 ಮಹಡಿಗಳ ಪ್ರೀಮಿಯಂ ವಸತಿ ಸಮುಚ್ಚಯವನ್ನು ವೆಸ್ಟ್‌ಲೈನ್ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ನಿರ್ಮಾಣ ಮಾಡುತ್ತಿದೆ. ಮಂಗಳೂರು ನಗರದ ನಂತೂರು ಬಳಿ, ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಈ ಬೃಹತ್ ವಸತಿ ಸಮುಚ್ಚಯ ನಿರ್ಮಾಣವಾಗಲಿದ್ದು, ಇದರ ಶಿಲಾನ್ಯಾಸವು ಸೆ.17ರಂದು ಸಂಜೆ 7:00ಕ್ಕೆ ನಡೆಯಲಿದೆ.

ದಕ್ಷಿಣ ಭಾರತದಲ್ಲೇ ಅತೀ ಎತ್ತರದಿಂದ ಕೂಡಿರುವ ವೆಸ್ಟ್‌ಲೈನ್ ಸಿಗ್ನೇಚರ್ ಸಂಪೂರ್ಣವಾಗಿ ಆವಿಷ್ಕಾರಿ ವಿನ್ಯಾಸದಿಂದ ಕೂಡಿರುವ ವಸತಿ ಸಮುಚ್ಚಯವಾಗಿದೆ. ಪ್ರೀಮಿಯಂ ಮನೆ ಪರಿಕಲ್ಪನೆಯೊಂದಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುತ್ತಿದೆ.

ಸಿಗ್ನೇಚರ್ ಯೋಜನೆಯ ವಿನ್ಯಾಸವನ್ನು ಅದ್ಭುತವಾಗಿ ತಯಾರಿಸಲಾಗಿದ್ದು, ಇದು ರಿಯಲ್ ಎಸ್ಟೇಟ್‌ನಲ್ಲೇ ವಿನೂತನ ವಿನ್ಯಾಸವಾಗಿದೆ. ಈ ಕಟ್ಟಡವು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ಕಟ್ಟಡವಾಗಿ ಮಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ. ಬಿಸಿಲಿನ ಪ್ರಖರತೆಯಿಂದ ಮನೆಯೊಳಗಿನ ಶಾಖ ಕಡಿಮೆ ಮತ್ತು ಮನೆ ತಂಪಾಗಿರುವಂತೆ ಮಾಡುವ ಉದ್ದೇಶದಿಂದ ಕಟ್ಟಡದ ಗೋಡೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಅಲ್ಟ್ರಾ ಐಷಾರಾಮಿ ಯೋಜನೆಯಲ್ಲಿ ಒಟ್ಟು 135 ವಸತಿಗಳಿದ್ದು, 4 ಬೆಡ್ ರೂಂನ ಡ್ಯುಪ್ಲೆಕ್ಸ್, 3 ಬೆಡ್ ರೂಂನ ಡ್ಯುಪ್ಲೆಕ್ಸ್, 3 ಬೆಡ್ ರೂಂ ಹಾಗೂ ಎರಡು ಬೆಡ್ ರೂಂನ ವಸತಿಗಳು ಇವೆ.

ವೃತ್ತಿಪರತೆಯಲ್ಲಿ ಪ್ರಬಲ ಹೆಗ್ಗುರುತು ಮತ್ತು ಜಾಗತಿಕ ಗುಣಮಟ್ಟ

ಕಳೆದ ಒಂದು ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸಂಸ್ಥೆಯು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಹೊಸ ಟ್ರೆಂಡ್ ಸೆಟ್ ಮತ್ತು ಲಕ್ಸೂರಿ ಜೀವನ ಎಂಬ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ನೀಡಲಾಗಿದೆ. ಅನುಭವ, ಪರಿಣತಿ, ದೃಷ್ಟಿ ಮತ್ತು ತಂಡದ ಪ್ಯೂಚರಿಸ್ಟಿಕ್ ವಿಧಾನವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ವೆಸ್ಟ್‌ಲೈನ್ ಅಗ್ರಪಂಕ್ತಿಯನ್ನು ಕಾಯ್ದುಕೊಂಡಿದೆ. ಸಂಸ್ಥೆಯ ವೃತ್ತಿಪರತೆ, ಚೈತನ್ಯದಿಂದ ಕೂಡಿದ ಕೆಲಸದಿಂದಾಗಿ ಸಮಾಜವು ಗೌರವಿಸಲ್ಪಟ್ಟಿದೆ.
ಯುವ ಮತ್ತು ಕ್ರಿಯಾತ್ಮಕ ನಾಸೀರ್ ಮೊಹಿದಿನ್ ಸಂಸ್ಥೆಯ ಸಿಇಒ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕಟ್ಟಿಂಗ್ ಎಜ್ಡ್ ಡಿಸೈನ್, ಜಾಗತಿಕ ಗುಣಮಟ್ಟ ಮತ್ತು ಕಟ್ಟಡ ವಿನ್ಯಾಸದ ಪರಿಕಲ್ಪನೆಯಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಎಲ್ಲರ ಪ್ರಶಂಸೆ ಗಳಿಸಿದ್ದಾರೆ.

ಪ್ರಕೃತಿಗೆ ಪೂರಕ, ಪರಿಸರ ಸ್ನೇಹಿ ಕಟ್ಟಡ ನಿರ್ಮಾಣದ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದೆ. ಇಲ್ಲಿ ಗ್ರೀನ್ ಬಿಲ್ಡಂಗ್‌ನ ಮಾನದಂಡದಂತೆ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಎನರ್ಜಿ ಉಳಿತಾಯ, ನೀರಿನ ಉಳಿತಾಯ, ತಂಪಾದ ಗಾಳಿ ಸಿಗಲಿದೆ.

ಸಮರ್ಥನೀಯ ಗ್ರೀನ್ ಬಿಲ್ಡಿಂಗ್ ಮೆಟೀರಿಯಲ್ಸ್ ಬಳಕೆ, ವಿದ್ಯುತ್ ಕಾರುಗಳಿಗೆ ರಿಚಾರ್ಜ್ ಸೌಲಭ್ಯ, ಲ್ಯಾಂಡ್‌ಸ್ಕೇಪಿಂಗ್ ನಿರ್ಮಾಣದ ಮೂಲಕ ಹವಾಮಾನದ ನಿಯಂತ್ರಣ, ಮಳೆ ನೀರು ಕೊಯ್ಲು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮತ್ತು ಮರು ಬಳಕೆ, ಸರಾಗವಾಗಿ ಬೆಳಕು ಹರಿಯುವ ಮೂಲಕ ವಿದ್ಯುತ್ ಉಳಿತಾಯ, ಎಲ್‌ಇಡಿ ಬಲ್ಬ್ ಬಳಕೆ, ಕೇಂದ್ರೀಕೃತ ಬಿಸಿ ನೀರು ಪೂರೈಕೆ, ಮೇಲ್ಭಾಗ ಮತ್ತು ಗಾರ್ಡನ್‌ನಲ್ಲಿ ಸೋಲಾರ್ ಆಧಾರಿತ ಬೆಳಕು ಅಳವಡಿಕೆ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಮುಂತಾದ ಸೌಲಭ್ಯಗಳ ಮೂಲಕ ಪರಿಸರ ಸ್ನೇಹಿಯಾಗಿ ಯೋಜನೆ ನಿರ್ಮಾಣ ಮಾಡಲಾಗುತ್ತದೆ.
ರಜಾ ಅವಧಿಯಲ್ಲಿ ಅಥವಾ ವಾರಾಂತ್ಯದಲ್ಲಿ ಚಲನಚಿತ್ರ ವೀಕ್ಷಣೆಗಾಗಿ ಮಿನಿ ಥಿಯೇಟರ್, ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಜಿಮ್, ಕ್ರೀಡಾಂಗಣ, ಗ್ರಂಥಾಲಯಗಳಿವೆ.

53 ಮಹಡಿಯ ಈ ಬೃಹತ್ ಕಟ್ಟಡದಲ್ಲಿ ಇಡೀ ಮಂಗಳೂರನ್ನು ವೀಕ್ಷಣೆ ಮಾಡಬಹುದಾಗಿದೆ. ಕಟ್ಟಡದ ಮೂರನೆ ಮಹಡಿಯ ನಂತರ ಸಮುದ್ರ ಕೂಡಾ ಕಾಣುತ್ತದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು ಕದ್ರಿ ಶಿವಬಾಗ್ ರಸ್ತೆಯಿಂದ ಈ ವಸತಿ ಸಮುಚ್ಚಯವನ್ನು ಸಂಪರ್ಕಿಸಬಹುದಾಗಿದೆ. ನಂತೂರು ವೃತ್ತದಿಂದ ಅನತಿ ದೂರದಲ್ಲಿ ನಿರ್ಮಾಣವಾಗಲಿದೆ. ಶೈಕ್ಷಣಿಕ ಸಂಸ್ಥೆ, ಧಾರ್ಮಿಕ ಕೇಂದ್ರ, ಮಾರುಕಟ್ಟೆ, ಮಾಲ್, ಸಂಪರ್ಕ, ಬಸ್ ನಿಲ್ದಾಣ ಹೀಗೆ ಎಲ್ಲವೂ ಸುತ್ತಮುತ್ತಲೇ ಇವೆ. ವಸತಿ ಸಮುಚ್ಚಯದ ಎಲ್ಲ ಭಾಗದಲ್ಲೂ ವಿಶಾಲವಾದ, ಸಾಕಷ್ಟು ನೈಸರ್ಗಿಕ ಬೆಳಕು ಸದಾ ಹರಿಯುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಕೇಂದ್ರೀಕೃತ ಹವಾನಿಯಂತ್ರಣ ಸೌಲಭ್ಯ ಕಲ್ಪಿಸುವ ಮೊದಲ ವಸತಿ ಸಮುಚ್ಚಯವಾಗಿದೆ. ಭೂಕಂಪವನ್ನು ತಡೆದುಕೊಳ್ಳಬಲ್ಲ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಲಾಬಿಯಲ್ಲಿ ಇಟಾಲಿಯನ್ ಅಮೃತಶಿಲೆ ಫ್ಲೋರಿಂಗ್, ಲಿವಿಂಗ್ ಪ್ರದೇಶದಲ್ಲಿ ಮರದ ರಚನೆ ಮಾದರಿಯ ಟೈಲ್ಸ್, ಭೋಜನ ಪ್ರದೇಶಕ್ಕೆ ಪ್ರೀಮಿಯಂ ವಿಟ್ರಿಪೈಡ್ ಟೈಲ್ಸ್, ಮಾಸ್ಟರ್ ಬೆಡ್ ರೂಂಗೆ ಅತ್ಯಂತ ಶ್ರೇಷ್ಠ ಗುಣಮಟ್ಟದ ವುಡನ್ ಫ್ಲೋರಿಂಗ್ ಅಳವಡಿಸಲಾಗುವುದು. ಪ್ರತಿಯೊಂದು ಹಂತದಲ್ಲೂ ಗುಣಮಟ್ಟದೊಂದಿಗೆ ರಾಜಿ ಮಾಡದೆ, ಶ್ರೀಮಂತಿಕೆಯ ಟಚ್ ನೀಡುವ ಬಾತ್ ರೂಂ, ಅಡುಗೆ ಕೋಣೆ, ಇತರ ಬೆಡ್ ರೂಂ ಮತ್ತು ಬಾಲ್ಕನಿ ಫ್ಲೋರಿಂಗ್ ಮಾಡಲಾಗುತ್ತದೆ.

ಲಾಬಿಗೆ ಆಟೋಮೆಟೆಡ್ ಡೋರ್, ರಿಮೋಟ್ ನಿಯಂತ್ರಿತ ಇಲೆಕ್ಟ್ರಿಕಲ್ ಗೇಟ್, ವೀಡಿಯೊ ಡೋರ್ ಪ್ರೋ, ಇಂಟರ್ ಕಾಂ ಸೌಲಭ್ಯ, ವೈಫೈ ಸಂಪರ್ಕ, ಭದ್ರತಾ ಕಣ್ಗಾವಲು ವ್ಯವಸ್ಥೆ, ಪ್ರತಿಯೊಂದು ವಸತಿಗೂ ಪೈಬರ್ ಆಪ್ಟಿಕ್ ಅಳವಡಿಕೆ ಮಾಡಲಾಗುವುದು.

ಇಂಡಿಪೆಂಡೆಂಟ್ ಮನೆಯ ಅನುಭವ ನೀಡುವ ಉದ್ದೇಶದಿಂದ ಎರಡು ಮನೆಗಳ ನಡುವೆ ಅಲ್ಪಕಾಮನ್ ಗೋಡೆ, ಸೂಪರ್ ಲಾರ್ಜ್ ಬೆಡ್ ರೂಂ ಇದೆ. ರೂಪ್ ಟಾಪ್‌ನಲ್ಲಿ ಓಪನ್ ಥಿಯೇಟರ್, ಇನ್‌ಫಿನಿಟಿ ಪೂಲ್ ವೇಡ್ ಪೂಲ್ ಮತ್ತು ಪೂಲ್ ಥಿಯೆಟರ್, ಅತ್ಯಾಧುನಿಕ ವ್ಯಾಯಾಮ ಶಾಲೆ, ಮರದ ನೆಲ ಹಾಸು ಇರುವ ಯೋಗ ಮತ್ತು ಏರೋಬಿಕ್ಸ್ ಕೊಠಡಿ, ರೂಪ್‌ಟಾಪ್‌ನಲ್ಲಿ ಪಾರ್ಟಿ ಹಾಲ್, ಹೆಲ್ತ್ ಕ್ಲಬ್ ವಿಂಗ್‌ನಲ್ಲಿ ಸ್ಟೀಮ್ ಸ್ನಾನದ ತೊಟ್ಟಿ-ಮಸಾಜ್ ರೂಂ ಸೌಲಭ್ಯ ನಿರ್ಮಾಣ ಮಾಡಲಾಗುವುದು.

3,770 ಚದರ ಅಡಿಯ 4 ಬೆಡ್ ರೂಂ ಡೂಪ್ಲೆಕ್ಸ್ ಮತ್ತು ಮೀಡಿಯಾ ರೂಂನ 20 ವಸತಿ, 1,590 ಚದರ ಅಡಿಯ ಎರಡು ಬೆಡ್ ರೂಂನ 30 ವಸತಿ, 3,180 ಚದರ ಅಡಿಯ ಮೂರು ಬೆಡ್ ರೂಂ ಡೂಪ್ಲೆಕ್ಸ್ ಮತ್ತು ಮೀಡಿಯಾ ರೂಂನ 5 ವಸತಿ, 1,695 ಚದರ ಅಡಿಯ ಎರಡು ಬೆಡ್ ರೂಂನ 30 ವಸತಿ, 3,390 ಚದರ ಅಡಿಯ ಮೂರು ಬೆಡ್ ರೂಂ ಡೂಪ್ಲೆಕ್ಸ್ ಮತ್ತು ಮೀಡಿಯಾ ರೂಂನ 5 ವಸತಿ, 2,150 ಚದರ ಅಡಿಯ ಮೂರು ಬೆಡ್ ರೂಂನ 30 ವಸತಿ, 4,300 ಚದರ ಅಡಿಯ ನಾಲ್ಕು ಬೆಡ್ ರೂಂ ಡೂಪ್ಲೆಕ್ಸ್ 5 ವಸತಿಗಳಿವೆ.

ಹೆಚ್ಚಿನ ಮಾಹಿತಿಗಾಗಿ www.westlinebuilders.com; Email: properties@westlinebuilders.com  ಸಂಪರ್ಕಿಸಬಹುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ನಾಸಿರ್ ಮೊಹಿದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News