ಪಂಜಾಬಿನಲ್ಲಿ 50,000ಕ್ಕೂ ಅಧಿಕ ಮಕ್ಕಳು ಮಧ್ಯಾಹ್ನದೂಟದಿಂದ ವಂಚಿತರು:ವರದಿ

Update: 2016-09-15 13:31 GMT

ಚಂಡಿಗಡ: ಪಂಜಾಬ್‌ನಲ್ಲಿಯ 32 ಸರಕಾರಿ ಅನುದಾನಿತ ಶಾಲೆಗಳ 50,000ಕ್ಕೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುತ್ತಿಲ್ಲ ಎಂದು ಮಹಾಲೇಖಪಾಲರ ಇತ್ತೀಚಿನ ವರದಿಯು ತಿಳಿಸಿದೆ.

ಪಂಜಾಬ್ ವಿಧಾನಸಭಾ ಅಧಿವೇಶನದ ಕೊನೆಯ ದಿನ ಸದನದಲ್ಲಿ ಮಂಡಿಸಲಾದ, 2015,ಮಾರ್ಚ್‌ಗೆ ಕೊನೆಗೊಂಡ ಅವಧಿಗೆ ಸರಕಾರಿ ಅನುದಾನಿತ ಖಾಸಗಿ ಸಂಸ್ಥೆಗಳ ಕುರಿತ ವರದಿಯು,ತಪಾಸಣೆಗಾಗಿ ಆಯ್ದುಕೊಂಡಿದ್ದ 180 ಶಾಲೆಗಳ ಪೈಕಿ 40 ಶಾಲೆಗಳಲ್ಲಿ 4ರಿಂದ 245 ದಿನಗಳವರೆಗೂ ಮಧ್ಯಾಹ್ನದೂಟವನ್ನು ಒದಗಿಸಲಾಗಿಲ್ಲ ಎನ್ನುವುದನ್ನೂ ಬಯಲು ಮಾಡಿದೆ.

ಕೇಂದ್ರ ಸರಕಾರದ ಪ್ರಾಯೋಜಿತ ಮಧ್ಯಾಹ್ನದೂಟ ಯೋಜನೆಯು ಅಮೃತಸರ ಮತ್ತು ಲೂಧಿಯಾನಾ ಜಿಲ್ಲೆಗಳಲ್ಲಿ ಜಾರಿಗೊಳ್ಳದ್ದರಿಂದ 50,417 ವಿದ್ಯಾರ್ಥಿಗಳು ಮಧ್ಯಾಹ್ನದೂಟದಿಂದ ವಂಚಿತರಾಗಿದ್ದಾರೆ ಎಂದಿರುವ ವರದಿಯು, 2010-15ರ ಅವಧಿಗೆ ಮಧ್ಯಾಹ್ನದೂಟ ತಯಾರಿಗೆ 810.82 ಕೋ.ರೂ.ಗಳನ್ನು ನಿಗದಿಗೊಳಿಸಿದ್ದರೂ ಬಿಡುಗಡೆಯಾಗಿದ್ದು 734.28 ಕೋ.ರೂ.ಮಾತ್ರ ಎಂದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News