×
Ad

ತೊಕ್ಕೊಟ್ಟು: ರಸ್ತೆಬದಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು

Update: 2016-09-15 19:37 IST

ಉಳ್ಳಾಲ, ಸೆ.15: ಕಂಠ ಪೂರ್ತಿ ಕುಡಿದು ರಸ್ತೆಯಲ್ಲಿ ತೆವಳುತ್ತಿದ್ದ ವ್ಯಕ್ತಿಯೋರ್ವರು ಹಠಾತ್ತನೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುರವಾರ ಮಧ್ಯಾಹ್ನ ತೊಕ್ಕೊಟ್ಟು ಜಂಕ್ಷನ್‌ನ ಮೇಲ್ಸೇತುವೆ ಬಳಿ ನಡೆದಿದೆ.

ತಲಪಾಡಿ ನಾರ್ಲಪದವಿನ ನಿವಾಸಿ ತಮಿಳುನಾಡು ಮೂಲದ ನಾಗರಾಜ್(46)ಮೃತ ವ್ಯಕ್ತಿ.

ನಾಗರಾಜ್ ಸಂಚಾರಿ ತಳ್ಳುಗಾಡಿಯಲ್ಲಿ ಇಸ್ತ್ರಿ ಹಾಕುವ ಕಾಯಕ ನಡೆಸುತ್ತಿದ್ದರೆನ್ನಲಾಗಿದೆ. ಬುಧವಾರ ರಾತ್ರಿ ಎಟಿಎಮ್‌ನಿಂದ 2,000 ರೂ. ಡ್ರಾ ಮಾಡಿದ ರಶೀದಿ ದೊರಕಿದ್ದು ಉಳಿದ 1,100 ರೂಪಾಯಿ ನಾಗರಾಜ್ ಅಂಗಿಯ ಜೇಬಲ್ಲಿ ದೊರೆತಿದೆ. ಗುರುವಾರ ಮಧ್ಯಾಹ್ನದವರೆಗೂ ತೊಕ್ಕೊಟ್ಟಿನ ರಸ್ತೆಯಲ್ಲೇ ಕಂಠಪೂರ್ತಿ ಕುಡಿದು ಹೊರಳಾಡುತ್ತಿದ್ದ ವ್ಯಕ್ತಿ ಜನರು ನೋಡುತ್ತಿದ್ದಂತೆಯೇ ಕುಸಿದು ಅಸುನೀಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News