ಸೆ.16ರಂದು ಪರಂಗಿಪೇಟೆಯಲ್ಲಿ ’ದ್ವೇಷ ರಾಜಕೀಯ ನಿಲ್ಲಿಸಿ’ ಅಭಿಯಾನಕ್ಕೆ ಚಾಲನೆ
ಬಂಟ್ವಾಳ, ಸೆ.15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆಶ್ರಯದಲ್ಲಿ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ’ದ್ವೇಷ ರಾಜಕೀಯ ನಿಲ್ಲಿಸಿ’ ಅಭಿಯಾನದ ಅಂಗವಾಗಿ ಬಂಟ್ವಾಳ ತಾಲೂಕಿನಾದ್ಯಂತ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಸೆ.16ರಂದು ಸಂಜೆ 4:60ಕ್ಕೆ ಪರಂಗಿಪೇಟೆಯಲ್ಲಿ ನಡೆಯಲಿದೆ.
ಸಮಾರಂಭವನ್ನು ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಕಲ್ಲಡ್ಕ ಉದ್ಘಾಟಿಸಲಿದ್ದು, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮುಖ್ಯ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಯಾನದ ಅಂಗವಾಗಿ ನಡೆಯುವ ಕ್ವಾರ್ನರ್ ಮೀಟ್ ವಾಹನ ಜಾಥಕ್ಕೆ ಚಾಲನೆ ಸಿಗಲಿದ್ದು ವಾಹನವು 7 ಗಂಟೆಗೆ ಅಮ್ಮೆಮಾರ್, 7:45ಕ್ಕೆ ಮಾರಿಪಳ್ಳ, 8:15ಕ್ಕೆ ತುಂಬೆ, 9 ಗಂಟೆಗೆ ವಳವೂರಿಗೆ ತೆರಳಿ ಅಭಿಯಾನದ ಕುರಿತು ಸಾರ್ವಜನಿಕರಿಗೆ ಸಂದೇಶ ನೀಡಲಿದೆ.
ಬಂಟ್ವಾಳ ತಾಲೂಕಿನ ಸಮಾರೋಪ ಸಮಾರಂಭ ಸೆ.26ರಂದು ಸಂಜೆ 4ಗಂಟೆಗೆ ವಿಟ್ಲದಲ್ಲಿ ನಡೆಯಲಿದೆ ಎಂದು ಪಿಎಫ್‌ಐ ಬಿ.ಸಿ.ರೋಡ್ ಡಿವಿಷನ್ ಅಧ್ಯಕ್ಷ ಸಲೀಂ ಕುಂಪನಮಜಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.