×
Ad

ಎ.ಬಿ.ಶೆಟ್ಟಿ ವೃತ್ತ-ಅಗ್ನಿಶಾಮಕದಳ ಕಚೇರಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

Update: 2016-09-16 11:05 IST

ಮಂಗಳೂರು, ಸೆ.16: 50 ಲಕ್ಷ ರೂ. ವೆಚ್ಚದಲ್ಲಿ ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಅಗ್ನಿಶಾಮಕದಳ ಕಚೇರಿಯನ್ನು ಸಂಪರ್ಕಿಸುವ 200 ಮೀಟರ್ ರಸ್ತೆಯ ಕಾಂಕ್ರಿಟೀಕರಣಗೊಳ್ಳಲಿದ್ದು, ಕಾಮಗಾರಿಗೆ ಶಾಸಕ ಜೆ.ಆರ್. ಲೋಬೊ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಗಳ ನಗರೋತ್ಥಾನ ಅನುದಾನದಲ್ಲಿ ಈ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ 3  ತಿಂಗಳೊಳಗೆ ಪೂರ್ಣಗೊಳ್ಳುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಎಂ., ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಉಪಮೇಯರ್ ಸುಮಿತ್ರಾ ಕರಿಯ, ಸ್ಥಾಯಿ ಸಮಿತಿಯ ಅಧ್ಯಕ್ಷ ಲ್ಯಾನ್ಸಿ ಲಾಟ್ ಪಿಂಟೋ, ಮನಪಾ ಸದಸ್ಯರಾದ ಎ.ಸಿ.ವಿನಯರಾಜ್,  ದಿವಾಕರ್, ಅಬ್ದುಲ್ಲತೀಫ್, ದೀಪಕ್ ಪೂಜಾರಿ, ಎಇ ಲಿಂಗೇಗೌಡ, ಜೆಇಗಳಾದ ಗಣಪತಿ, ಲಕ್ಷಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News