ಕೋಡಿ: ಬ್ಯಾರೀಸ್ ಕಾಲೇಜಿನಲ್ಲಿ ‘ಗಾನ ಐಸಿರಿ’
ಕುಂದಾಪುರ, ಸೆ.16: ಕೋಡಿಯ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಕಡಲಸಿರಿ ಸಾಂಸ್ಕೃತಿಕ ಸಂಘದಿಂದ ‘ಗಾನ ಐಸಿರಿ’ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸಂಗೀತ ವಿದೂಷಿ ಸುಧಾ ರಾಜ್‌ಗೋಪಾಲ್ ಕೋಟೇಶ್ವರ, ಭಾವಗೀತೆ, ಜಾನಪದ ಗೀತೆ ಹಾಗೂ ಸಂಪ್ರದಾಯದ ಶೋಭಾನೆಯ ಹಿನ್ನೆಲೆಗಳ ಕುರಿತು ಗಾಯನದ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಮಾತನಾಡಿ, ಗಾಯನಕಲೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಳ್ಳವುದರೊಂದಿಗೆ ಭವಿಷ್ಯದಮಧುರ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಬಿಲ್ಲವರ, ಮೊಗವೀರ ಸಮುದಾಯದ ಮರೆಯಾದ ಶೋಭಾನೆ ಹಾಡನ್ನು ನೆನಪಿಸಿಕೊಂಡರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್, ಸಾಂಸ್ಕೃತಿಕ ಸಂಘದ ಸಂಘಟಕ ಸಂದೀಪ ಶೆಟ್ಟಿ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಸುಚಿತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಯಾ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಅತಿಥಿಗಳನ್ನು ಪರಿಚಯಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಲೋಹಿತ್ ಸ್ವಾಗತಿಸಿ, ಸುಮಂತಾ ಕೆ. ವಂದಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.