×
Ad

ಸ್ವಾರ್ಥ ಬಿಟ್ಟು ಸಮಾಜದ ಅಭಿವೃದ್ಧಿಗೆ ಜಾಗೃತಿ ಮಾಡೋಣ: ಎಸಿ ಡಾ.ರಾಜೇಂದ್ರ

Update: 2016-09-16 18:03 IST

ಪುತ್ತೂರು, ಸೆ.16: ಅನ್ಯಾಯದ ವಿರುದ್ಧ ಚಾಲೇಂಜ್ ಮಾಡಿ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರು ಸಾಮಾಜಿಕ ಬದಲಾವಣೆಗೆ ಕಾರಣೀಭೂತರಾದರು. ಆದರೆ ಇಂದು ಸಮಾಜದಲ್ಲಿ ಸ್ವಾರ್ಥ ಸಾಧನೆ ಹೆಚ್ಚಾಗುತ್ತಿದ್ದು, ಇದನ್ನೆಲ್ಲಾ ಬಿಟ್ಟು ಸಮಾಜ ಸುಧಾರಣೆಗಾಗಿ ಜಾಗೃತಿ ಮಾಡುವ ಕೆಲಸವಾಗಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಅವರು ಶುಕ್ರವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಮಿನಿ ವಿಧಾನ ಸೌಧದಲ್ಲಿನ ಸಭಾಂಗಣದಲ್ಲಿ ಸರಕಾರಿ ಕಾರ್ಯಕ್ರಮವಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿದ್ದ ವರ್ಣಭೇದದ ವಿರುದ್ಧವಾಗಿ ಒಂದು ಸಮುದಾಯದ ಬೀಜದೊಗಳಗಿನ ನಾಯಕರಾಗಿ ಹುಟ್ಟಿ ಬಂದ ನಾರಾಯಣ ಗುರುಗಳು ಸಮಾಜ ಸುಧಾರಕ ಬಸವಣ್ಣನಂತ ಜಾತಿ ಮತಗಳಲ್ಲಿನ ಬೇಧ ಬಾವ ತೊಡೆದು ಹಾಕಿದರು. ಅವರ ಆದರ್ಶ ತತ್ವಗಳನ್ನು ಇಂದು ಅವಲೋಕನ ಮಾಡುವ ಸಮಯ. ಈ ನಿಟ್ಟಿನಲ್ಲಿ ಸರಕಾರದ ವಿವಿಧ ಯೋಜನೆಗಳು ಅರ್ಹರಿಗೆ ಸಿಗುವಲ್ಲಿ ಪ್ರಯತ್ನಗಳಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಮೂಲಕ ಕಾರಣವೇ ನಮ್ಮ ಜಿಲ್ಲೆ. ಹಿಂದೆ ನಾರಾಯಣ ಗುರುಗಳು ಮಾನವೀಯತೆಯನ್ನು ಜಗತ್ತಿಗೆ ಸಾರಿದ ಪ್ರಥಮ ಗುರುವಾಗಿದ್ದರು. ಮಾನವೀಯತೆಯು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಇಂದಿನ ಸಮಾಜಕ್ಕೆ ಮಾನವ ಧರ್ಮ ಅಗತ್ಯವಾಗಿ ಬೇಕಾಗಿದೆ. ಮಾನವೀಯತೆ ಇದ್ದರೆ ಸೋದರತೆ ಉಳಿಯುತ್ತದೆ. ಸೋದರತೆ ಉಳಿದರೆ ದೇಶ ಉಳಿಯುತ್ತದೆ ಎಂದು ಹೇಳಿದರು.

ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ನವೀನ್ ಕುಮಾರ್ ಮರಿಕೆಯವರು ಉಪನ್ಯಾಸ ನೀಡಿದರು.

ಉಪತಹಶೀಲ್ದಾರ್ ಶ್ರೀಧರ್ ಕೆ. ಸ್ವಾಗತಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಬಿ.ಎಸ್. ಪುಟ್ಟ ಶೆಟ್ಟಿ ವಂದಿಸಿದರು. ಪ್ರೋ. ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News