ಸೌದಿಗೆ ಬ್ರಿಟನ್ ರಾಯಭಾರಿ ಇಸ್ಲಾಮ್‌ಗೆ ಮತಾಂತರ
ರಿಯಾದ್, ಸೆ. 16: ಸೌದಿ ಅರೇಬಿಯಕ್ಕೆ ಬ್ರಿಟನ್‌ನ ರಾಯಭಾರಿ ಸೈಮನ್ ಕಾಲಿಸ್ ಇತ್ತೀಚೆಗೆ ಇಸ್ಲಾಮ್‌ಗೆ ಮತಾಂತರ ಹೊಂದಿದ್ದು, ಹಜ್ ಯಾತ್ರೆ ಕೈಗೊಂಡಿದ್ದಾರೆ.
ಈ ರಾಜತಾಂತ್ರಿಕ ಇತ್ತೀಚೆಗೆ ಸಾಂಪ್ರದಾಯಿಕ ಬಿಳಿ ಬಟ್ಟೆಯುಟ್ಟು ತನ್ನ ಹೆಂಡತಿಯೊಂದಿಗೆ ಇರುವ ಚಿತ್ರ ಪ್ರಕಟವಾಗಿದೆ.
ಕಾಲಿಸ್ 2015ರಿಂದ ಬ್ರಿಟನ್ ರಾಯಭಾರಿಯಾಗಿ ರಿಯಾದ್‌ನಲ್ಲಿದ್ದಾರೆ. ಅವರು ಹಜ್ ಯಾತ್ರೆ ಕೈಗೊಂಡ ಪ್ರಥಮ ಬ್ರಿಟಿಶ್ ರಾಯಭಾರಿ ಎಂದು ವೆಬ್‌ಸೈಟೊಂದು ವರದಿ ಮಾಡಿದೆ.
ಸಿರಿಯದ ಮುಸ್ಲಿಮ್ ಮಹಿಳೆ ಹುದಾ ಅಲ್-ಮುಜರ್‌ಕೆಚ್‌ರನ್ನು ಮದುವೆಯಾಗಿರುವ ಕಾಲಿಸ್, ಈ ಹಿಂದೆ ಇರಾಕ್, ಬಹ್ರೈನ್ ಮತ್ತು ಸಿರಿಯಗಳಲ್ಲಿ ಬ್ರಿಟನ್‌ನ ರಾಯಭಾರಿಯಾಗಿದ್ದರು. ಸಿರಿಯದಲ್ಲಿ ಅಂತರ್ಯುದ್ಧ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, 2012ರಲ್ಲಿ ಅವರನ್ನು ಸಿರಿಯದಿಂದ ಅಧ್ಯಕ್ಷ ಬಶರ್ ಅಲ್ ಅಸಾದ್ ಹೊರಗಟ್ಟಿದ್ದರು.
ಅವರು ಇದೇ ಸ್ಥಾನದಲ್ಲಿ ಟ್ಯುನೀಶಿಯ, ಭಾರತ, ಯಮನ್ ಮತ್ತು ಯುಎಇಗಳಲ್ಲೂ ಸೇವೆ ಸಲ್ಲಿಸಿದ್ದರು.
‘‘30 ವರ್ಷಗಳ ಕಾಲ ಮುಸ್ಲಿಮ್ ಸಮಾಜದೊಂದಿಗೆ ಕಳೆದ ಬಳಿಕ, ಇಸ್ಲಾಮ್‌ಗೆ ಮತಾಂತರ ಹೊಂದಿದೆ’’ ಎಂದು ಕಾಲಿಸ್ ಹೇಳುತ್ತಾರೆ.