×
Ad

‘ಮನುಕುಲದ ಮಾರ್ಗದರ್ಶಕ’ ಕೃತಿ ಬಿಡುಗಡೆ

Update: 2016-09-16 21:39 IST

ಮಂಗಳೂರು, ಸೆ.16: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಪ್ರಕಾಶನ ವಿಭಾಗವಾದ ಸತ್ಯ ಪ್ರಕಾಶನ ಸಂಸ್ಥೆಯ ವತಿಯಿಂದ ಪ್ರಕಟಿಸಲಾದ ಲೇಖಕ ಇಸ್ಮಾಯೀಲ್ ಶಾಫಿಯವರು ಬರೆದ ‘ಮನುಕುಲದ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ)’ ಎಂಬ ಕೃತಿಯ ದ್ವಿತೀಯ ಮುದ್ರಣದ ಬಿಡುಗಡೆ ಸಮಾರಂಭವು ಇಂದು ಬೆಳಗ್ಗೆ ನಗರದ ನೆಲ್ಲಿಕಾಯಿ ರಸ್ತೆಯ ದಾರುಲ್ ಖೈರ್ ಸಭಾಭವನದಲ್ಲಿ ಜರಗಿತು.

ದ.ಕ., ಉಡುಪಿ ಜಿಲ್ಲೆಗಳ ನೋಂದಾಯಿತ ಸಂಘಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಾನಂದ ದೇವಾಡಿಗ ಕೃತಿಯನ್ನು ಬಿಡುಗಡೆ ಗೊಳಿಸಿದರು. ಕರ್ನಾಟಕ ಸಲಫಿ ಫೌಂಡೇಶನ್ ಜಿದ್ದಾ ಘಟಕದ ಪ್ರಧಾನ ಕಾರ್ಯದರ್ಶಿ ಶಾರ್ಫುದ್ದೀನ್ ಜಿದ್ದಾ ಕೃತಿ ಸ್ವೀಕಾರ ಮಾಡಿದರು.

ಎಸ್‌ಕೆಎಸ್‌ಎಂನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಎಸ್‌ಎಂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಉಪಾಧ್ಯಕ್ಷ ಅಬೂಬಕರ್ ಪಾಂಡೇಶ್ವರ, ಮಾಜಿ ಅಧ್ಯಕ್ಷ ಅಹ್ಮದ್ ಅನ್ಸಾರ್, ಸತ್ಯ ಪ್ರಕಾಶನದ ಕಾರ್ಯದರ್ಶಿ ಯಾಕೂಬ್ ಎ., ಸಲಫಿ ಎಜುಕೇಶನ್ ಬೋರ್ಡ್‌ನ ಉಪಾಧ್ಯಕ್ಷ ಅಬ್ಬಾಸ್ ಕಂಕನಾಡಿ, ಯುವ ಉದ್ಯಮಿ ಅರಾಫಾತ್ ಯು.ಎನ್., ಮೌಲವಿ ಸುಹೈಲ್ ಕಡಮೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News