ಹೋಟೆಲ್‌ನಲ್ಲಿ ದುಡಿಯುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

Update: 2016-09-16 18:00 GMT

ಮಂಗಳೂರು: ಸೆ. 16: ನಗರದ ಕೂಳೂರು ಜಂಕ್ಷನ್ ಬಳಿಯ ಹೋಟೇಲೊಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದ ಸುಮಾರು 13 ವರ್ಷ ಪ್ರಾಯದ ಬಾಲಕನನ್ನು ಚೈಲ್ಡ್‌ಲೈನ್ ಮಂಗಳೂರು-1098 ಮತ್ತು ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

 ಬಾಲಕನು ಉತ್ತರ ಕರ್ನಾಟಕ ಮೂಲದ ಕೊಪ್ಪಳ ಜಿಲ್ಲೆಯವನಾಗಿದ್ದು, ಈತನ ಹೆತ್ತವರು ಕೂಲಿ ಕಾರ್ಮಿಕರಾಗಿದ್ದಾರೆ. ಕುಟುಂಬದಲ್ಲಿ ಬಡತನ ಇರುವ ಕಾರಣ ಹೊಟೇಲ್ ಕೆಲಸಕ್ಕೆ ಸೇರಿರುವುದಾಗಿ, ಊರಿನಲ್ಲಿ 3 ತರಗತಿ ತನಕ ಶಾಲೆಗೆ ಹೋಗಿದ್ದು, ಶಿಕ್ಷಣ ಮುಂದುವರಿಸಬೇಕೆಂಬ ಆಸಕ್ತಿ ಇದ್ದರೂ, ಹೆತ್ತವರು ಕೆಲಸ ಹುಡುಕಿಕೊಂಡು ಮಂಗಳೂರಿಗೆ ವಲಸೆ ಬಂದಿರುವ ಕಾರಣ ಶಾಲೆಯನ್ನು ಅರ್ಧದಲ್ಲಿಯೇ ತ್ಯಜಿಸಿ, ಹೊಟೇಲ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದೆನೆಂದು ಬಾಲಕ ಹೇಳಿದ್ದಾನೆ.

ಸೂಕ್ತ ವ್ಯವಸ್ಥೆುಲ್ಲದೇ ಬಾಲಕ ಶಿಕ್ಷಣ ವಂಚಿತರಾಗಿದ್ದು, ಈತನಿಗೆ ಸೂಕ್ತ ಪುನರ್ವಸತಿ, ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

ಈ ಬಾಲಕನ ರಕ್ಷಣಾ ತಂಡದಲ್ಲಿ ಕಾರ್ಮಿಕ ಇಲಾಖಾಧಿಕಾರಿಗಳಾದ ಶೇಖರ್ ಗೌಡ, ಗಣಪತಿ ಹೆಗಡೆ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ್, ಮಂಗಳೂರು ಚೈಲ್ಡ್‌ಲೈನ್-1098ನ ಕೇಂದ್ರ ಸಂಯೋಜಕ ಸಂಪತ್ ಕಟ್ಟಿ ಇವರ ಮಾರ್ಗದರ್ಶನದಂತೆ ಚೈಲ್ಡ್‌ಲೈನ್-1098 ಸಿಬಂದಿಗಳಾದ ಅಸುಂತ ಡಿಸೋಜ, ಪವಿತ್ರ ಜ್ಯೋತಿಗುಡ್ಡೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News