×
Ad

ತಮಿಳುನಾಡಿನಲ್ಲಿ ಇನ್ನು ’ಅಮ್ಮ ಮ್ಯಾರೆಜ್‌ ಹಾಲ್‌ ’

Update: 2016-09-17 13:42 IST

ಚೆನ್ನೈ, ಸೆ.17: ತಮಿಳುನಾಡಿನಲ್ಲಿ ಜನಪರ ಯೋಜನೆಗಳ ಮೂಲಕ ಜನಪ್ರಿಯತೆ ಗಳಿಸಿರುವ ಮುಖ್ಯ ಮಂತ್ರಿ ಜಯಲಲಿತಾ  ನೇತೃತ್ವದ ಸರಕಾರ ಇದೀಗ ರಾಜ್ಯದಲ್ಲಿ  ಹನ್ನೊಂದು ಮದುವೆ ಹಾಲ್‌ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಮದುವೆ ಮತ್ತಿತರ ಶುಭ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ  83 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ 11 ಮದುವೆ ಹಾಲ್‌ಗಳನ್ನು ನಿರ್ಮಿಸುವ ಯೋಜನೆ  ಹಾಕಿಕೊಳ್ಳಲಾಗಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.
ವೆಲಾಚೇರಿ, ಟೊಂಡಿಯರ‍್ಪೆಟ್‌, ಅಯಪಕ್ಕಮ್‌, ಪೆರಿಯಾರ‍್ ನಗರ, ಚೆನ್ನೈನ ಕೊರಟ್ಟೂರು, ಅಣ್ಣಾ ನಗರ, ತಿರುನೆಲ್‌ವೆಲ್ಲಿಯ ಅಂಬಾಸಮುದ್ರಮ್‌, ಸೇಲಮ್‌ನ ಸೇಲಮ್‌ನಲ್ಲಿ,ತಿರುವೆಲ್ಲೂರಿನ ಕೊಡುಂಗೈಯೂರ‍್, ತ್ರಿಪುರ್‌ನ ಉದುಮಲೈಪೆಟ್ ನಲ್ಲಿ ಅಮ್ಮ ಮದುವೆ ಹಾಲ್‌ಗಳು ತಲೆಎತ್ತಲಿವೆ.
ಹಾಲ್‌ನಲ್ಲಿ ವಧು-ವರರಿಗೆ ಹವಾನಿಯಂತ್ರಿತ ಕೊಠಡಿ, ಗೆಸ್ಟ್ ರೂಂ, ಡೈನಿಂಗ್‌ ಹಾಲ್‌ ಮತ್ತು ಅಡುಗೆ ಕೋಣೆ ಇರುತ್ತದೆ.
ಇದೇ ವೇಳೆ ತಮಿಳುನಾಡಿನ ಕೊಳಚೆ ವಿಮೋಚನಾ ಮಂಡಳಿಯ ಮೂಲಕ 1,800 ಕೋಟಿ ರೂ. ವೆಚ್ಚದಲ್ಲಿ  ಐವತ್ತು ಸಾವಿರ ಮನೆಗಳ ನಿರ್ಮಾಣ ಮಾಡಲಿದೆ.45ಸಾವಿರ ಮನೆಗಳ ನಿರ್ಮಾಣಕ್ಕೆ 945 ಕೋಟಿ ರೂ.ಗಳ ಸಬ್ಸಿಡಿ ನೀಡಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News