×
Ad

ಎಲ್‌ಇಡಿ ಬಲ್ಬ್‌ಗಳ ಬೆಲೆ ಇಳಿಕೆ

Update: 2016-09-17 16:42 IST

ಹೊಸದಿಲ್ಲಿ, ಸೆಪ್ಟಂಬರ್ 17: ಎಲ್‌ಇಡಿ ಬಲ್ಬ್‌ಗಳ ಬೆಲೆ ದಿಢೀರನೆ ಇಳಿಕೆಯಾಗಿದೆ. ಎನರ್ಜಿ ಎಫಿಶೆಂಟ್ ಸರ್ವೀಸ್ ಲಿಮಿಟೆಡ್(ಇಇಎಸ್‌ಎಲ್)ಮೂಲಕ ದೇಶಾದ್ಯಂತ ವಿತರಣೆ ಮಾಡಲು ಲಭಿಸಿದ ಕೋಟೆಶನ್‌ಗಳ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ.

ಈರೀತಿ ಒಂಬತ್ತು ವ್ಯಾಟ್ ನ ಎಲ್‌ಇಡಿ ಬಲ್ಬ್ ನ್ನು 38ರೂಪಾಯಿಗೆ ನೀಡಬೇಕೆಂದು ಕಂಪೆನಿಗಳು ಹೇಳಿದ್ದವು. ಐದು ಕೋಟಿ ಎಲ್‌ಇಡಿ ಬಲ್ಬ್‌ಗಳು ನಿರ್ಮಿಸುವ ಗುತ್ತಿಗೆ ಹದಿನಾಲ್ಕು ಕಂಪೆನಿಗಳಿಗೆ ನೀಡಲಾಗಿದೆ. ಕಳೆದ ಮಾರ್ಚ್‌ನಲ್ಲಿ 55 ರೂಪಾಯಿಯ ಕನಿಷ್ಠ ದರವಾಗಿತ್ತು. 2014ರ ಯೋಜನೆ ಪ್ರಕಾರ 310ರೂಪಾಯಿಗೆ ಎಲ್‌ಇಡಿ ಬಲ್ಬ್‌ಗಳನ್ನು ಪಡೆಯಲಾಗಿತ್ತು.

ಸಾರ್ವಜನಿಕ ಮಾರುಕಟ್ಟೆಯಲ್ಲಿಕೂಡಾ ಎಲ್‌ಇಡಿ ಬಲ್ಬ್‌ಗಳ ಬೆಲೆಯಲ್ಲಿ ಇಳಿಕೆ ಯಾಗಿದೆ. ಇಲ್ಲಿ ಒಂಬತ್ತು ವ್ಯಾಟ್ ಬಲ್ಬ್‌ಗಳು 90 ರೂಪಾಯಿಯಿಂದ 100ರೂಪಾಯಿವರೆಗೆ ದೊರಕುತ್ತವೆ. ಎರಡು ವರ್ಷ ಮೊದಲು ದೇಶದಲ್ಲಿ ಪ್ರತಿತಿಂಗಳಲ್ಲಿ ಹತ್ತುಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ತಯಾರಿಸಲಾಗುತ್ತಿತ್ತು. ಈಗ ನಾಲ್ಕುಕೋಟಿ ಬಲ್ಬ್‌ಗಳನ್ನು ತಯಾರಿಸಲಾಗುತ್ತಿವೆ. ಯೋಜನೆ ಪ್ರಕಾರ ಹದಿನೈದು ಕೋಟಿ ಎಲ್‌ಇಡಿ ಬಲ್ಬ್‌ಗಳನ್ನು ದೇಶದಲ್ಲಿ ಈವರೆಗೆ ವಿತರಿಸಲಾಗಿದೆ. ಸಿಎಫ್‌ಎಲ್‌ಗಿಂತ ಅರ್ಧದಷ್ಟು ವಿದ್ಯುತ್ ಎಲ್‌ಇಡಿ ಬಲ್ಬ್‌ಗಳಿಗೆ ಸಾಕಾಗುತ್ತದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News