ಪ್ರಧಾನಿ ಮೋದಿಗೆ ವಿಭಿನ್ನವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಕನ್ಹಯ್ಯ

Update: 2016-09-17 13:07 GMT

ಹೊಸದಿಲ್ಲಿ, ಸೆ. 17 : 65% ಯುವಜನತೆ ಇರುವ ದೇಶಕ್ಕೆ 65 ವರ್ಷದ ಪ್ರಧಾನಿ ಇರುವುದು ಹೇಗೆ  ? ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಪ್ರಶ್ನಿಸಿದ್ದಾರೆ.

"ಇಂದು ಪ್ರಧಾನಿ ತಮ್ಮ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.  ಆದರೆ  ದೇಶದ ಅರ್ಧ ಜನ ಬೀದಿಗಳಲ್ಲಿ, ಉಳಿದರ್ಧ ಜನ ಜೈಲುಗಳಲ್ಲಿದ್ದಾರೆ. ಸಂಭ್ರಮಕ್ಕೆ ಇದಕ್ಕಿಂತ ಕಾರಣ ಬೇಕೆ ? " ಎಂದು ಕನ್ಹಯ್ಯ ಪ್ರಧಾನಿಯನ್ನು ಕುಟುಕಿದ್ದಾರೆ.

"  ಗಾಂಧೀಜಿ ಹಾಗೂ ಭಗತ್ ಸಿಂಗ್ ಕೂಡ ಜೈಲಿಗೆ ಹೋಗಿದ್ದಾರೆ. ಈ ಜಗತ್ತು ಹಲವರ ಪಾಲಿಗೆ ಜೈಲು.  ಸ್ವಾತಂತ್ರ್ಯವಿಲ್ಲದ ಮಹಿಳೆಯರು, ನಿರುದ್ಯೋಗಿ ಯುವಕರ ಪಾಲಿಗೆ ಈ ಜಗತ್ತು ಜೈಲು "  ಎಂದು ತಮ್ಮ ವಾಸದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.

ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯ ಮಾತನಾಡಲು ಸಭಿಕರಲ್ಲಿ ಕೆಲವರು ಅಡ್ಡಿ ಪಡಿಸಿದ ಬಳಿಕ ಕನ್ಹಯ್ಯ ತಮ್ಮ ಭಾಷಣವನ್ನು ಅರ್ಧದಲ್ಲೇ ಮೊಟಕು ಗೊಳಿಸಬೇಕಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News