ಸೆ.19ರಿಂದ 21ರ ವರೆಗೆ ಮದರ್ ತೆರೇಸಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್

Update: 2016-09-17 13:44 GMT

ಮಂಗಳೂರು,ಸೆ.17:ಮದರ್ ತೆರೇಸಾ ಅವರಿಗೆ ಸಂತ ಪದವಿ ನೀಡಿದ ಘಟನೆಯನ್ನು ನೆನಪಿಸುವ ಅಂಗವಾಗಿ ಮದರ್ ತೆರೇಸಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೆ.19ರಿಂದ 21ರ ವರೆಗೆ ನಗರದ ಆಯ್ದ ಕಡೆಗಳಲ್ಲಿ ನಡೆಯಲಿದೆ ಎಂದು ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ವಿಜಯ್ ವಿಕ್ಟರ್ ಲೋಬೊ ಹೇಳಿದರು.

   ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಚಲನಚಿತ್ರೋತ್ಸವ ಈಗಾಗಲೇ ದೇಶದ ನಾನಾ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಫಿಲ್ಮ್ ಫೆಸ್ಟಿವಲ್‌ವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಮದರ್ ತೆರೇಸಾ ಕುರಿತು ತಯಾರಾದ 20ಕ್ಕೂ ಅಧಿಕ ಸಿನಿಮಾಗಳಲ್ಲಿ 8 ಚಿತ್ರಗಳನ್ನು ಆಯ್ಕೆ ಮಾಡಿ ಈ ಫಿಲ್ಮ್ ೆಸ್ಟಿವಲ್‌ನಲ್ಲಿ ತೋರಿಸಲಾಗುತ್ತದೆ. ಈ ಚಲನಚಿತ್ರೋತ್ಸವನ್ನು ಸಿಗ್ನಿಸ್ ಇಂಡಿಯ, ಕೆನರಾ ಸಂಪರ್ಕ ಕೇಂದ್ರ ಮಂಗಳೂರು ಧರ್ಮಪ್ರಾಂತ್ಯ,ಸಂದೇಶ ಪ್ರತಿಷ್ಠಾನ, ಮಿಶನರೀಸ್ ಆ್ ಚಾರಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯಲಿದೆ ಎಂದರು.

 19ರಂದು ಮಂಗಳೂರಿನ ಸೈಂಟ್ ಆಗ್ನೇಸ್ ಸ್ಪೆಶಲ್ ಸ್ಕೂಲ್‌ನಲ್ಲಿ ಇದರ ಉದ್ಘಾಟನೆ ನಡೆಯಲಿದೆ. ಇದರಲ್ಲಿ ಮದರ್ ತೆರೇಸಾ ಅವರು ಪೋಷಣೆ ಮಾಡಿದ ಖ್ಯಾತ ಚಿತ್ರ ನಿರ್ದೇಶಕ ಹಾಗೂ ಛಾಯಾಚಿತ್ರಗಾರ ಗೌತಮ್ ಲೂವಿಸ್ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಸೆ.20ರಂದು ಸೈಂಟ್ ಜೋಸೆಫ್ ಸೆಮಿನಾರ್ ಹಾಲ್‌ನಲ್ಲಿ ಹಾಗೂ 21ರಂದು ನಂತೂರು ಪದುವಾ ಕಾಲೇಜು ಹಾಲ್‌ನಲ್ಲಿ ಈ ಚಿತ್ರೋತ್ಸವ ನಡೆಯಲಿದೆ ಎಂದರು.

 ವಿಶೇಷವಾಗಿ ಮದರ್ ಆ್ಯಂಡ್ ಮೀ, ದೀ ಲಿವಿಂಗ್ ಲೆಜೆಂಡ್, ಮದರ್ ತೆರೇಸಾ ದೀ ಲೆಗೆಸ್ಸಿ, ಇನ್ ದೀ ನೇಮ್ ಆ್ ಗಾಡ್ಸ್ ಪೂವರ್, ಮದರ್ ತೆರೇಸಾ ಪೆಟ್ರಿ ಮೊದಲಾದ ದೇಶ- ವಿದೇಶದ ಚಿತ್ರಗಳು ಆಂಗ್ಲ ಭಾಷೆಯ ಸಬ್ ಟೈಟಲ್‌ನೊಂದಿಗೆ ಪ್ರದರ್ಶನವಾಗಲಿದೆ. ಈ ಚಿತ್ರೋತ್ಸವ ಉಚಿತವಾಗಿರುವುದರಿಂದ ಎಲ್ಲರೂ ಭಾಗವಹಿಸಬಹುದು ಎಂದರು.

     ಮದರ್ ತೆರೇಸಾ ಅವರು ಬದುಕಿದ್ದಾಗ ಮಂಗಳೂರಿಗೆ ನಾಲ್ಕು ಬಾರಿ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ಮಂಗಳೂರಿನಲ್ಲಿ ಹೋದ ಸ್ಥಳಗಳಲ್ಲಿ ಈ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ವರ್ಷದ ಡಿ.31ರ ವರೆಗೆ ಈ ಚಿತ್ರಗಳನ್ನು ಪ್ರದರ್ಶನ ಮಾಡುವ ಹಕ್ಕನ್ನು ಚಿತ್ರದ ನಿರ್ದೇಶಕರು ನೀಡಿದ್ದಾರೆ. ಫಾ. ವಿಜಯ್ ವಿಕ್ಟರ್ ಲೋಬೊ ಹೇಳಿದರು. ಈ ಸಂದರ್ಭ ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕ ಫಾ. ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News