ಹನಿ ನೀರಾವರಿ ಯೋಜನೆ ಯಿಂದ ಅಡಿಕೆ ಬೆಳೆ ಹೊರಕ್ಕೆ

Update: 2016-09-17 13:47 GMT

ಮಂಗಳೂರು,ಸೆ.17:ಕೇಂದ್ರ ಸರಕಾರವು ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಯೋಜನೆ ಯಿಂದ ಅಡಿಕೆ ಬೆಳೆಗಾರರನ್ನು ಕೈಬಿಟ್ಟಿರುವುದರಿಂದ ಅಡಿಕೆ ಬೆಳೆಗಾರರರಿಗೆ ಸಿಗುವ ಸಹಾಯ ಧನ ಪಡೆಯುವುದರಿಂದ ಅಡಿಕೆ ಬೆಳೆಗಾರರರು ವಂಚಿತರಾಗಲಿದ್ದು ಇದಕ್ಕಾಗಿ ಪ್ರಧಾನಿಯವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದರು.

  ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಫಿ , ಟೀ, ರಬ್ಬರ್ ಬೆಳೆಯು ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಯೋಜನೆಯಲ್ಲಿ ಇದೆ. ಆದರೆ ಅಡಿಕೆ ಬೆಳೆಯನ್ನು ಕೈಬಿಟ್ಟು ಕೇಂದ್ರ ಸರಕಾರವು ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಿದೆ ಎಂದರು.

  ಕೇಂದ್ರ ಸರಕಾರವು ಅಡಿಕೆ ಬೆಳೆಗೆ ರಕ್ಷಣೆ ಕೊಡಲು ಪ್ರಯತ್ನ ಮಾಡುತ್ತಿಲ್ಲ. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಮಡಿಕೆ ಬೆಳೆಯ ರಕ್ಷಣೆ ಮಾಡಬೇಕೆಂದು ಪಾದಯಾತ್ರೆ , ತುಲಾಭಾರ ಮಾಡಿದವರು ಈಗ ಕೇಂದ್ರದಲ್ಲಿ ಸಚಿವರಾಗಿ ವೌನವಾಗಿದ್ದಾರೆ.

    ಕಾಫಿ ಬೋರ್ಡ್‌ನಂತೆ ಅಡಿಕೆ ಬೆಳೆಗಾರರ ಬೋರ್ಡ್ ಅಗತ್ಯವಿದೆ. ಅಡಿಕೆ ಬೋರ್ಡ್ ಮಾಡಿದರೆ ಬೆಳೆಗೆ ಬೆಲೆ ತೊಂದರೆಯಾದಾಗ ಬೆಂಬಲ ಬೆಲೆ ನೀಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಗಮನಹರಿಸುವಂತೆ ಕೇಂದ್ರ ಕ್ಕೆ ಒತ್ತಡವೇರುವಂತೆ ರಾಜ್ಯ ಸರಕಾರ ಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News