ಮಂಗಳೂರಿನ ಶ್ರೀ ಧ. ಮ. ವ್ಯವಹಾರ ನಿರ್ವಹಣೆ ಕಾಲೇಜ್‌ಗೆ ವಿವಿ ಮಟ್ಟದ 'ಫ್ಯಾಕುಲಾ' ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ
ಪುತ್ತೂರು,ಸೆ.17: ಪುತ್ತೂರಿನ ಸಂತ ಫೀಲೋಮಿನಾ ಕಾಲೇಜಿನಲ್ಲಿ ಗುರುವಾರ ನಡೆದ ಮಂಗಳೂರು ವಿ.ವಿ.ಮಟ್ಟದ ’ಫ್ಯಾಕುಲಾ 2016’ ವಾಣಿಜ್ಯ ಮತ್ತು ನಿರ್ವಹಣಾ ಸ್ಪರ್ಧೋತ್ಸವದಲ್ಲಿ ಸಮಗ್ರ ಪ್ರಶಸ್ತಿಯನ್ನು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ನಿರ್ವಹಣೆ ಕಾಲೇಜು ಮತ್ತು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪಡೆದುಕೊಂಡಿತು.
ಮಂಗಳೂರು ವಿವಿ ವ್ಯಾಪ್ತಿಯ ಹತ್ತು ಕಾಲೇಜುಗಳ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ಈ ಸ್ಪರ್ಧೋತ್ಸವದಲ್ಲಿ ಭಾಗವಹಿಸಿದ್ದರು. ’ಆಕೃತಿ’ - ನಾನು ಯಾರು? ಸ್ಪರ್ಧೆಯಲ್ಲಿ ಸುಳ್ಯದ ನೆಹರೂ ಸ್ಮಾರಕ ಕಾಲೇಜು, ’ಅನ್ವೇಷಣೆ’ - ಹೊಸ ಉತ್ಪನ್ನ ಬಿಡುಗಡೆ ಸ್ಪರ್ಧೆಯಲ್ಲಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ನಿರ್ವಹಣೆ ಕಾಲೇಜು, ’ಅಧ್ವಯ’ - ವ್ಯವಹಾರ ರಸಪ್ರಶ್ನೆ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮತ್ತು ’ಅದ್ವಿತೀಯ’ - ಉತ್ತಮ ಕಾರ್ಯ ನಿರ್ವಹಣಾ ಅಧಿಕಾರಿ ಸ್ಪರ್ಧೆಯಲ್ಲಿ ಮಂಗಳೂರಿನ ಶ್ರೀ ಧರ್ಮಸ್ಥಳ ವ್ಯವಹಾರ ನಿರ್ವಹಣೆ ಕಾಲೇಜು ಪ್ರಶಸ್ತಿ ಪಡೆದುಕೊಂಡಿದೆ.