ಯೆನೆಪೋಯ ವಿ.ವಿಯಲ್ಲಿ ಹಿಮೋಡಯಲಿಸೀಸ್ ಮತ್ತು ರಕ್ತ ಪರಿಚಲನಾ ವ್ಯವಸ್ಥೆಯ ಅಭಿವೃದ್ಧಿ ತರಬೇತಿ ಕಾರ್ಯಗಾರ
ಮಂಗಳೂರು,ಸೆ.18;ಅವರು ಇಂದು ದೇರಳಕಟ್ಟೆ ಯೆನೆಪೋಯ ವಿಶ್ವ ವಿದ್ಯಾನಿಲಯದ ವೈದ್ಯಕೀಯ ಕಾಲೇಜ್ ಆಸ್ಪತ್ರೆಯ ಸಭಾಂಗಣದಲ್ಲಿ ಹಿಮೋ ಡೈಯಲಿಸೀಸ್ ಮೂಲಕ ರಕ್ತನಾಳಗಳ ಅಭಿವೃದ್ಧಿ ಬಗ್ಗೆ ಕರ್ನಾಟಕ ಯರೋಲಜಿ ಎಸೋಸಿಯೇಶನ್ ಮತ್ತು ಯೆನೆಪೋಯ ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಹಮ್ಮಿಕೊಂಡ ಒಂದು ದಿನ ತಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಹಿರಿಯ ಅಂಗಾಂಗ ಕಸಿ ತಜ್ಞ ವೈದ್ಯರಾದ ಡಾ.ದಿಲೀಪ್ ಜವಳಿ ಇಂದು ಉದ್ಘಾಟಿಸಿದರು.
ಸಮಾರಂಭದಲ್ಲಿ ರಕ್ತನಾಳಗಳ ಉಬ್ಬುವಿಕೆ ಹಾಗೂ ಅದರಿಂದ ದೇಹದ ರಕ್ತ ಪರಿಚಲನಾ ವ್ಯವಸ್ಥೆಯ ಮೇಲಾಗುವ ಹಾನಿಯ ಬಗ್ಗೆ ಜವಳಿ ಮಾಹಿತಿ ನೀಡಿದರು.ಪಿಸ್ತೂಲಾ ದಂತಹ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸಯಿಂದ ಗುಣಪಡಿಸಲು ಸಾಧ್ಯವಿದೆ. ರಕ್ತಪರಿಚಲನಾಂಗಗಳು ಹಾನಿಗೊಂಡಾಗ ಅವುಗಳನ್ನು ಸಕಾಲದಲ್ಲಿ ಗುರುತಿಸಿ,ಸೂಕ್ತ ರೀತಿಯ ಚಿಕಿತ್ಸೆ ನೀಡಲು ಆಧುನಿಕ ಸೌಲಭ್ಯಗಳಿ ವೈದ್ಯಕೀಯ ಕ್ಷೇತ್ರದಲ್ಲಿ ಲಭ್ಯವಿದೆ ಈ ಹಿನ್ನೆಲೆಯಲ್ಲಿ ರಕ್ತನಾಳಗಳು ಹಾನಿಗೊಂಡಾಗ ಹಾಗೂ ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಗುಣಪಡಿಸಲು ಸಾಧ್ಯವಿರುವ ಕಾರಣ ಈ ಬಗ್ಗೆ ರೋಗಿಗಳು ಆತ್ಮ ವಿಶ್ವಾಸವನ್ನು ತುಂಬಬಹುದಾಗಿದೆ ಎಂದು ಡಾ.ದಿಲೀಪ್ ಜವಳಿ ತಿಳಿಸಿದರು.
ಸಮಾರಂಭದಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಶ್ರೀಕುಮಾರ್ ಮೆನನ್ ,ಕರ್ನಾಟಕ ಯರೋಲಜಿ ಎಸೋಸಿಯೇಶನ್‌ನ ಅಧ್ಯಕ್ಷ ಡಾ.ಅರುಣ್ ಚಾವ್ಲ, ಯೆನೆಪೋಯ ವಿ.ವಿ ಪ್ರೊಫೆಸರ್ ಡಾ.ಸುಲೈಮಾನ್,ಡಾ.ಮುಜೀಬ್ ರಹ್‌ಮಾನ್, ಡಾ.ಸಂತೋಷ್ ಪೈ,ಡಾ.ಗಿರೀಶ್,ಡಾ.ಅಲ್ತಾಫ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಾ.ಪ್ರಕೃತಿ ಕಾರ್ಯಕ್ರಮ ನಿರೂಪಿಸಿದರು.