ಸುಳ್ಯದಲ್ಲಿ ಅತೀ ಎತ್ತದ ವಸತಿ ಸಮುಚ್ಚಯಕ್ಕೆ 22ರಂದು ಶಂಕುಸ್ಥಾಪನೆ
ಸುಳ್ಯ,ಸೆ.17: ಇವಾ ಕನ್ಸಲ್ಟಿಂಗ್ ವತಿಯಿಂದ ಸುಳ್ಯದ ಜಟ್ಟಿಪಳ್ಳದಲ್ಲಿ ನಿರ್ಮಾಣಗೊಳ್ಳಲಿರುವ ಬಹುಮಹಡಿ ವಸತಿ ಸಮುಚ್ಛಯದ ಶಿಲಾನ್ಯಾಸ ಕಾರ್ಯಕ್ರಮ ಸೆ.22ರಂದು ನೆರವೇರಲಿದೆ ಎಂದು ಸಮುಚ್ಚಯ ಮಾಲಕ ಮಹಮ್ಮದ್ ಬಶೀರ್ ಅರಂಬೂರು ಅವರು ತಿಳಿಸಿದ್ದಾರೆ.
2 ಮತ್ತು 3 ಬೆಡ್ ರೂಂಗಳಿರುವ ನಿವಾಸಿಗಳಿಗೆ ಸ್ಥಿರ ಪಾರ್ಕಿಂಗ್ ಸೌಲಭ್ಯ, ಸಂದರ್ಶಕರ ಪಾರ್ಕಿಂಗ್ ಆದೇ, ಜಿಮ್, ಮಿನಿ ಪಾರ್ಟಿ ಹಾಲ್, ಸೋಲಾರ್ ವಿದ್ಯುತ್ ಸಂಪರ್ಕ, 24 ಗಂಟೆ ಸೆಕ್ಯೂರಿಟಿ, ಇಜು ಕೊಳ, ಉದ್ಯಾನವನ, ಮಕ್ಕಳ ಆಡುವ ಸ್ಥಳ, ಧ್ಯಾನ ಕೇಂದ್ರ, ನಿರಂತರ ನೀರಿನ ಸರಬರಾಜು, ಮಿನಿ ಸೂಪರ್, ಮಾರ್ಕೆಟ್, ಒಳಾಂಗಣ ಕ್ರೀಡಾ ಸೌರ್ಯ, ಆಧುನಿಕ ಲಿಫ್ಟ್ ಸೌಲಭ್ಯ ಇನ್ನಿತರ ಸೌಳ್ಬಯಘಲು ಇದೆ ಎಂದು ಅವರು ಹೇಳಿದರು.
ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಡ್‌ರವರು ಸಮುಚ್ಚಯದ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಎನ್.ಪಿ.ಎಂ. ಝೆನೈನುಲ್ ಅಬಿದಿನ್ ತಂಙಳ್ ದುಗ್ಗಲಡ್ಕ, ಅಹಮ್ಮದ್ ಖಾಸಿಂ ತಂಙಳ್ ಸಖಾಫಿ, ಅಶ್ರಫ್ ಖಾಮಿಲ್ ಸಖಾಫಿ ಖತೀಬ್ ಸುಳ್ಯ, ಹಝ್ರತ್‌ರಫೀಕ್ ರಝ್ವಿ ಖತೀಬ್ ಅಂಬೆಟಡ್ಕ, ಮುಹಮ್ಮದ್ ರಫೀಕ್ ಮುಸ್ಲಿಯಾರ್ ಅರಂಬೂರ್ ಆಶೀರ್ವಚನ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳಾದ ವಿನ್ಸೆಂಟ್ ಡಿಸೋಜಾ, ಸುಳ್ಯ ಚೆನ್ನಕೇಶವ ದೇವಸ್ಥಾನದ ಮೊಕ್ತೇಸರರಾದ ಡಾ ಹರಪ್ರಸಾದ್ ತುದಿಯಡ್ಕ, ಸುಳ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ಲಾ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕರಾದ ಎಸ್ ಅಂಗಾರ, ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ ಚಿದಾನಂದ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಗೌಡ ಎಜ್ಯುಕೇಶನ್ ಸಂಸ್ಥೆ ಅಧ್ಯಕ್ಷ ಧನಂಜಯ ಅಡ್ಪಂಗಾಯ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಎನ್.ಎ ರಾಮಚಂದ್ರ, ಎಸ್ ಸಂಶುದ್ದೀನ್, ಮಾಜಿ ಲಯನ್ಸ್ ಗವರ್ನರ್ ಎಂ.ಬಿ ಸದಾಶಿವ, ಕರ್ನಾಟಕ ಸರಕಾರ ಕೆಪೆಕ್ ನಿರ್ದೇಶಕ ಹಾಜಿ ಪಿ.ಎ. ಮಹಮ್ಮದ್, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ.. ಶಹೀದ್, ಸುಳ್ಯ ವೃತ್ತ ನಿರೀಕ್ಷಕರಾದ ವಿ. ಕೃಷ್ಣಯ್ಯ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ರಮಾನಂದ ರೈ, ಹಾಜಿ ಕೆ.ಎಂ. ಮುಸ್ತಫ, ಉಮ್ಮರ್ ಕೆ.ಎಸ್. ಆರೆನೈಸ್ ಬಿ.ಪಿ.ಎಸ್ ಬೆಂಗಳೂರು ನಿರ್ದೇಶಕ ವಸಂತಕುಮಾರ್ ಕಮಿಲ, ವರ್ತಕ ಸಂಘದ ಅಧ್ಯಕ್ಷ ಸುಧಾಕರ ರೈ, ಕರ್ನಾಟಕ ಪ್ಲೆವುಡ್ ಸಂಸ್ಥೆ ಮಾಲಕ ಕೆ.ಕೃಷ್ಣ ಕಾಮತ್, ಆಮ್ ಆದ್ಮಿ ಪಕ್ಷದ ಕನ್ವಿನರ್ ಅಶೋಕ್ ಎಡಮಲೆ, ಯುವಕ ಮಂಡಲದ ಅಧ್ಯಕ್ಷ ಜಟ್ಟಿಪಳ್ಳ ನವೀನ್ ಕುಮಾರ್ ಕಜೆ, ನಿವೃತ್ತ ಆರೋಗ್ಯಾಧಿಕಾರಿ ಡಾ ರಂಗಯ್ಯ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಅಬ್ದುಲ್ ರೆಹಮಾನ್, ಕೆ.ಪಿ.ಮಹಮ್ಮದ್, ಇಂಜಿನಿಯರ್ ಇಮ್ತಿಯಾಜ್ ಪಾಶಾ, ಖಲಂದರ್ ಶಾಫಿ, ಅಬ್ದುಲ್ ಕುಂಞಿ, ಇಹಾನ್ ಬಶೀರ್ ಉಪಸ್ಥಿತರಿದ್ದರು.