ಮರಳು ಸಮಸ್ಯೆ: ಹೋರಾಟಕ್ಕೆ 21 ಸಂಘಟನೆಗಳ ಸಮಿತಿ ರಚನೆ
ಉಡುಪಿ,ಸೆ.17:ಚೆನ್ನೈನ ಹಸಿರು ಪೀಠ ಮರಳುಗಾರಿಕೆಗೆ ನೀಡಿರುವ ತಡೆಯಾಜ್ಞೆಯನ್ನು ಅ.1ರವರೆಗೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮದ ಬಗ್ಗೆ ಮರಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲೆಯ ವಿವಿಧ ಸಂಘಟನೆಗಳು ಚರ್ಚಿಸಿ ಸೆ.22ರಂದು ಬೃಹತ್ ಮಟ್ಟದ ಪ್ರತಿಭಟನಾ ರ್ಯಾಲಿ ಸಂಘಟಿಸಿ ಸಂಬಂಧಿತರಿಗೆ ಮನವಿ ಅರ್ಪಿಸಲು ತೀರ್ಮಾನಿಸಿದವು.
ಅಲ್ಲದೇ ಸಭೆಯಲ್ಲಿ ಸಮಸ್ಯೆಯ ವಿವಿಧ ಆಯಾಮಗಳ ಕುರಿತು ಚರ್ಚಿಸಿ ಆರು ಅಂಶಗಳ ನಿರ್ಣಯಗಳನ್ನು ಸಹ ಕೈಗೊಳ್ಳಲಾಯಿತು. ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ-ಟೆಂಪೋ ಮಾಲಕರ ಸಂಘ ಕಟಪಾಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಇಂಜಿನಿಯರ್ಸ್ ಎಂಡ್ ಆರ್ಕಿಟೆಕ್ಟ್ ಸಂಘ, ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ರೈತ ಸಂಘ, ಕಾರ್ಮಿಕರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ತುಳುನಾಡು ರಕ್ಷಣಾ ವೇದಿಕೆ, ಜಯಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸೆ.22ರಂದು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಿಂದ ಮರಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ 21 ಸಂಘಟನೆಗಳ 10,000 ಮಂದಿ ಸೇರಿ ಜೋಡುಕಟ್ಟೆಯಿಂದ ಕಲ್ಸಂಕದ ರಾಯಲ್ ಗಾರ್ಡನ್ಸ್‌ವರೆಗೆ ಬೃಹತ್ ರ್ಯಾಲಿ ನಡೆಸಿ ಬಳಿಕ ಅಲ್ಲಿಂದ ಎಲ್ಲರೂ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ, ತಾಪಂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ನೀಡಲು ನಿರ್ಧರಿಸಲಾಗಿದೆ. ಅಂದು ಎಲ್ಲಾ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪಸ್ಥಿತರಿ ರುವಂತೆ ಮನವಿ ಮಾಡಿಕೊಳ್ಳಲಾಗುವುದು. ಅಂದು ಗೈರುಹಾಜರಾದವರನ್ನು ಜನರ ಸಮಸ್ಯೆಗೆ ಸ್ಪಂಧಿಸದವರು ಎಂದು ಭಾವಿಸಲಾಗುವುದು ಎಂದು ಲಾರಿ- ಟೆಂಪೊ ಮಾಲಕ, ಚಾಲಕರ ಸಂಘದ ಪ್ರದಾನ ಕಾರ್ಯದರ್ಶಿ ಎಂ.ಜಿ. ನಾಗೇಂದ್ರ ಸಭೆಯ ವಿವರಗಳನ್ನು ಪತ್ರಕರ್ತರಿಗೆ ನೀಡುತ್ತಾ ತಿಳಿಸಿದರು.
ನಿರ್ಣಯಗಳು:
1.ನಾನ್ ಸಿಆರ್‌ಝಡ್ ಪ್ರದೇಶಗಳಲ್ಲಿ ಮರಳುಗಾರಿಕೆಗೆ ತಡೆಯಾಜ್ಞೆ ತಂದಿರುವ ಇಬ್ಬರು ಸಹ ತಮ್ಮ ಅರ್ಜಿಗಳನ್ನು ಹಿಂದಕ್ಕೆ ಪಡೆಯಲು ಒಪ್ಪಿಕೊಂಡಿದ್ದಾರೆ. ಅವರೊಂದಿಗೆ ಮಾತನಾಡಿ ಅರ್ಜಿ ಹಿಂದಕ್ಕೆ ಪಡೆಯಲು ಜಿಲ್ಲಾಡಳಿತ ಮುಂದಾಗಬೇಕು.
2.2013ರಲ್ಲಿ ಡಾ.ವಿ.ಎಸ್.ಆಚಾರ್ಯ ಅವರು ಮಾಡಿದಂತೆ ತುರ್ತು ಸಾಂಪ್ರದಾಯಿಕ ಮರಳುಗಾರಿಕೆಗೆ ತಾತ್ಕಾಲಿಕ ಪರ್ಮಿಟ್‌ಗಳನ್ನು ನೀಡಬೇಕು. ಮರಳು ವಿತರಣೆಯಲ್ಲಿ ಜಿಲ್ಲೆಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಹೊರಜಿಲ್ಲೆಗೆ ಮರಳು ಸಾಗಿಸಲು ಕಟ್ಟುನಿಟ್ಟಿನ ಮಾನದಂಡಗಳನ್ನು ವಿಧಿಸಬೇಕು.
3.ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ತಡೆಯಾಜ್ಞೆ ನೀಡಿರುವ ಚೆನ್ನೈ ಹಸಿರು ಪೀಠದ ಮುಂದಿನ ವಿಚಾರಣೆ ಅ.1ಕ್ಕೆ ನಡೆಯಲಿದೆ. ಅಲ್ಲಿ ವಾದಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮುಂದೆ ಮರಳುಗಾರಿಕೆಗೆ ಬೇಕಾದ ಎಲ್ಲಾ ಮಾರ್ಗದರ್ಶಿ, ನಿಯಮಾವಳಿಗಳನ್ನು ಜಿಲ್ಲಾಧಿಕಾರಿಗಳು ಈಗಲೇ ಸಿದ್ದಪಡಿಸಿಟ್ಟುಕೊಳ್ಳಬೇಕು.
4. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಏಕರೂಪದ ಮರುಳ ನೀತಿಯನ್ನು ಜಾರಿಗೊಳಿಸಬೇಕು. ಇದರೊಂದಿಗೆ ಏಕರೂಪದ ಮರಳು ದರವನ್ನು ನಿಗದಿಗೊಳಿಸಬೇಕು.
5. ಜಿಲ್ಲೆಗೆ ಸಂಬಂಧಿಸಿದಂತೆ ಮರಳು ನೀತಿಯನ್ನು ರಚಿಸುವ ಸಭೆಗೆ ಇಂದು ರಚಿಸಲಾದ ಸಮಿತಿಯ ಪದಾಧಿಕಾರಿಗಳನ್ನು ಕರೆದು ಅವರೊಂದಿಗೆ ಚರ್ಚಿಸ ಬೇಕು. ಜಿಲ್ಲಾಡಳಿತ ಕೂಡಲೇ ಸಭೆಯ ದಿನಾಂಕವನ್ನು ನಿಗದಿಗೊಳಿಸಬೇಕು. 5. ಜಿಲ್ಲೆಗೆ ಸಂಬಂಧಿಸಿದಂತೆ ಮರಳು ನೀತಿಯನ್ನು ರಚಿಸುವ ಸೆಗೆಇಂದುರಚಿಸಲಾದಸಮಿತಿಯಪದಾಧಿಕಾರಿಗಳನ್ನುಕರೆದುಅವರೊಂದಿಗೆಚರ್ಚಿಸಬೇಕು.ಜಿಲ್ಲಾಡಳಿತಕೂಡಲೇಸೆಯ ದಿನಾಂಕವನ್ನು ನಿಗದಿಗೊಳಿಸಬೇಕು. ಸಮಾಲೋಚನಾ ಸಭೆಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್‌ನ ಜೆರ್ರಿ ವಿನ್ಸೆಂಟ್ ಡಯಾಸ್, ರಂಜನ್ ಕಲ್ಕೂರ, ಶ್ರೀನಾಗೇಶ್ ಹೆಗ್ಡೆ, ವಿವಿಧ ಸಂಘಟನೆಗಳ ಜನನಿ ದಿವಾಕರ ಶೆಟ್ಟಿ, ಬಿ.ಬಿ.ಪೂಜಾರಿ, ಅನ್ಸಾರ್ ಅಹ್ಮದ್, ಸದಾನಂದ ಬಳ್ಕೂರು, ರವಿ ಶೆಟ್ಟಿ, ರಮೇಶ್ ಶೆಟ್ಟಿ, ಐಕಳಬಾವ ಚಿತ್ತರಂಜನ್‌ದಾಸ ಶೆಟ್ಟಿ, ವಿಜಯಕುಮಾರ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.