×
Ad

ದಕ್ಷಿಣ ಭಾರತದ ಎತ್ತರದ ವಸತಿ ಸಮುಚ್ಚಯ ‘ವೆಸ್ಟ್‌ಲೈನ್ ಸಿಗ್ನೇಚರ್’ಗೆ ಶಿಲಾನ್ಯಾಸ

Update: 2016-09-17 22:51 IST

ಮಂಗಳೂರು, ಸೆ.17: ವೆಸ್ಟ್‌ಲೈನ್ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ವತಿಯಿಂದ ನಗರದ ನಂತೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿರುವ ದಕ್ಷಿಣ ಭಾರತದ ಅತ್ಯಂತ ಎತ್ತರದ ವಸತಿ ಸಮುಚ್ಚಯ ‘ವೆಸ್ಟ್ ಲೈನ್ ಸಿಗ್ನೇಚರ್’ಗೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್, ಬ್ಲಾಸಂ ಫೆರ್ನಾಂಡಿಸ್, ಶಾಸಕ ಜೆ.ಆರ್.ಲೋಬೊ, ಬ್ಯಾರೀಸ್ ಗ್ರೂಪ್‌ನ ಸೈಯದ್‌ಮುಹಮ್ಮದ್ ಬ್ಯಾರಿ, ಮಾಜಿ ಸಚಿವ ಬಿ.ಎ.ಮೊದಿನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ ಸಾಹೇಬ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ, ಎಸ್‌ಎಂ.ರಶೀದ್ ಹಾಜಿ, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಕಾರ್ಪೊರೇಟರ್ ಕೇಶವ ಮರೋಲಿ, ವೆಸ್ಟ್‌ಲೈನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ನಾಸಿರ್ ಮೊದಿನ್, ಅವರ ತಂದೆ ಅಬ್ದುಲ್ ರಹ್ಮಾನ್, ಸಹೋದರ ಯಾಸರ್, ಆರ್ಕಿಟೆಕ್ಚರ್ ಗುಲ್ಶನ್ ರಾಯ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸಂಸ್ಥೆಯ ಬ್ರೋಚರ್‌ನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಕರ್ ಫೆರ್ನಾಂಡಿಸ್, ಬೆಳೆಯುತ್ತಿರುವ ಮಂಗಳೂರಿಗೆ ‘ವೆಸ್ಟ್‌ಲೈನ್ ಸಿಗ್ನೇಚರ್’ ವಸತಿ ಸಮುಚ್ಚಯವು ಆಕರ್ಷಣೆಯನ್ನು ಹೆಚ್ಚಿಸಲಿದೆ. ಎತ್ತರದ ವಸತಿ ಸಮುಚ್ಚಯ ನಿರ್ಮಾಣಕ್ಕೆ ಕೈ ಹಾಕಿರುವ ನಾಸಿರ್ ಮೊದಿನ್ ಅವರ ಸಾಹಸ ಮೆಚ್ಚುವಂತದ್ದು. ಶೀಘ್ರದಲ್ಲೇ ಉದ್ದೇಶಿತ ಕಟ್ಟಡವು ಪೂರ್ಣಗೊಳ್ಳಲಿದೆ ಎಂದು ಹಾರೈಸಿದರು.

ಸಚಿವ ರಮಾನಾಥ ರೈ ಮಾತನಾಡಿ, ನಾಲ್ಕು ರಸ್ತೆಗಳು ಕೂಡುವ ನಂತೂರ್ ಜಂಕ್ಷನ್‌ನಲ್ಲಿ ದ.ಭಾರತದಲ್ಲೇ ಅತೀ ಎತ್ತರದ ವಸತಿ ಸಮುಚ್ಚಯ ಎಂದು ಹೇಳಲಾದ ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವ ಸಂಕೇತವಾಗಿದೆ. ನಾಸಿರ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಇಂತಹ ಸಾಹಸಕ್ಕೆ ಕೈ ಹಾಕಿದ್ದು, ಅವರ ಯೋಜನೆ ಶೀಘರದಲ್ಲೇ ಪೂರ್ಣಗೊಳ್ಳಲಿ ಎಂದರು.

ಈಗಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಪಡೀಲ್‌ನಲ್ಲಿ ಸ್ಥಳಾಂತರಗೊಳ್ಳಲಿದ್ದು, ಇದಕ್ಕಾಗಿ ಸ್ಥಳವನ್ನು ಗುರುತಿಸಲಾಗಿದೆ. ಸಣ್ಣ ಪುಟ್ಟ ತೊಡಕುಗಳಿದ್ದು, ಅದು ಪರಿಹಾರವಾದರೆ ಉದ್ದೇಶಿತ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.

53 ಮಹಡಿಗಳ ಅತ್ಯಾಕರ್ಷಕ ವಿನ್ಯಾಸದ ‘ವೆಸ್ಟ್‌ಲೈನ್ ಸಿಗ್ನೇಚರ್’ ಸಮುಚ್ಚಯದಲ್ಲಿ ಒಟ್ಟು 135 ವಸತಿಗಳಿದ್ದು, 4 ಬೆಡ್‌ರೂಂನ ಡ್ಯುಪ್ಲೆಕ್ಸ್, 3 ಬೆಡ್ ರೂಂನ ಡ್ಯುಪ್ಲೆಕ್ಸ್, 3 ಬೆಡ್‌ರೂಂ ಹಾಗೂ ಎರಡು ಬೆಡ್‌ರೂಂನ ಫ್ಲಾಟ್‌ಗಳು ಇರಲಿವೆ.

ಸೂರ್ಯನ ಪ್ರಖರ ಶಾಖವನ್ನು ಕಡಿಮೆಗೊಳಿಸಿ ಮನೆ ತಂಪಾಗಿರುವಂತೆ ಸಮುಚ್ಚಯದ ಗೋಡೆಗಳನ್ನು ವಿನ್ಯಾಸಗೊಳಿಸಲಾಗಿದೆ. ಭೂಕಂಪ ತಡೆದುಕೊಳ್ಳಬಲ್ಲ ರೀತಿಯಲ್ಲಿ ಸಮು ಚ್ಚಯ ನಿರ್ಮಾಣವಾಗಲಿದೆ. ವಿದ್ಯುತ್ ಕಾರುಗಳಿಗೆ ರಿಚಾರ್ಜ್ ಸೌಲಭ್ಯ, ಲ್ಯಾಂಡ್‌ಸ್ಕೇಪಿಂಗ್ ನಿರ್ಮಾಣದ ಮೂಲಕ ಹವಾಮಾನದ ನಿಯಂತ್ರಣ, ಮಳೆ ನೀರು ಕೊಯ್ಲು, ತ್ಯಾಜ್ಯನೀರು ಸಂಸ್ಕರಣಾ ಘಟಕ, ಕೇಂದ್ರೀಕೃತ ಬಿಸಿ ನೀರು ಪೂರೈಕೆ, ಮೇಲ್ಭಾಗ ಮತುತಿ ಗಾರ್ಡನ್‌ನಲ್ಲಿ ಸೋಲಾರ್ ಆಧಾರಿತ ಬೆಳಕಿನ ಸೌಲಭ್ಯ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಜಿಮ್, ಕ್ರೀಡಾಂಗಣ, ಗ್ರಂಥಾಯಲ ಮುಂತಾದ ಸೌಲಭ್ಯಗಳು ‘ವೆಸ್ಟ್‌ಲೈನ್ಸಿಗ್ನೇಚರ್’ ಹೊಂದಲಿದೆ. ಅಲ್ಲದೆ, ರಿಮೋಟ್ ನಿಯಂತ್ರಿತ ಇಲೆಕ್ಟ್ರಿಕಲ್ ಗೇಟ್, ವೀಡಿಯೊ ಡೋರ್ ಫೋನ್, ಇಂಟರ್ ಕಾಂ, ವೈಫೈ, ಭದ್ರತಾ ಕಣ್ಗಾವಲು ವ್ಯವಸ್ಥೆ, ಪ್ರತಿಯೊಂದು ವಸತಿಗೂ ಫೈಬರ್ ಆಪ್ಟಿಕ್ ಅಳವಡಿಕೆ ಮಾಡಲಾಗುವುದು.

ಸ್ವತಂತ್ರ ಮನೆಯ ಅನುಭವ ನೀಡುವ ಉದ್ದೇಶದಿಂದ ಎರಡು ಮನೆಗಳ ನಡುವೆ ಪುಟ್ಟ ಕಾಮನ್ ಗೋಡೆ, ಸೂಪರ್ ಲಾರ್ಜ್ ಬೆಡ್ ರೂಂ ಇರಲಿವೆ. ರೂಫ್‌ಟಾಪ್‌ನಲ್ಲಿ ಓಪನ್ ಥಿಯೇಟರ್, ಇನ್‌ಫಿನಿಟಿ ಪೂಲ್, ವೇಡ್ ಪೂಲ್ ಮತುತಿ ಪೂಲ್ ಥಿಯೇಟರ್, ಅತ್ಯಾಧುನಿಕ ವ್ಯಾಯಾಮ ಶಾಲೆ, ಮರದ ನೆಲ ಹಾಸು ಇರುವ ಯೋಗ ಮತುತಿ ಏರೋಬಿಕ್ಸ್ ಕೊಠಡಿ, ರೂಪ್‌ಟಾಪ್‌ನಲ್ಲಿ ಪಾರ್ಟಿ ಹಾಲ್, ಹೆಲ್‌ತಿ ಕ್ಲಬ್ ವಿಂಗ್‌ನಲ್ಲಿ ಸ್ಟೀಮ್‌ಬಾತ್ ತೊಟ್ಟಿ, ಮಸಾಜ್ ರೂಂ ಸೌಲಭ್ಯವನ್ನು ಹೊಂದಿರಲಿದೆ.

3,770 ಚದರ ಅಡಿಯ 4 ಬೆಡ್ ರೂಂ ಡೂಪ್ಲೆಕ್ಸ್ ಮತ್ತು ಮೀಡಿಯಾ ರೂಂನ 20 ವಸತಿ, 1,590 ಚದರ ಅಡಿಯ ಎರಡು ಬೆಡ್ ರೂಂನ 30 ವಸತಿ, 3,180 ಚದರ ಅಡಿಯ ಮೂರು ಬೆಡ್‌ರೂಂ ಡೂಪ್ಲೆಕ್ಸ್ ಮತ್ತು ಮೀಡಿಯಾ ರೂಂನ 5 ವಸತಿ, 1,695 ಚದರ ಅಡಿಯ ಎರಡು ಬೆಡ್‌ರೂಂನ 30 ವಸತಿ, 3,390 ಚದರ ಅಡಿಯ ಮೂರು ಬೆಡ್ ರೂಂ ಡೂಪ್ಲೆಕ್ಸ್ ಮತ್ತು ಮೀಡಿಯಾ ರೂಂನ 5 ವಸತಿ, 2,150 ಚದರ ಅಡಿಯ ಮೂರು ಬೆಡ್ ರೂಂನ 30 ವಸತಿ ಹಾಗೂ 4,300 ಚದರ ಅಡಿಯ ನಾಲ್ಕು ಬೆಡ್ ರೂಂ, ಡೂಪ್ಲೆಕ್ಸ್ 5 ವಸತಿಯನ್ನು ‘ವೆಸ್ಟ್‌ಲೈನ್ ಸಿಗ್ನೇಚರ್’ ಒಳಗೊಂಡಿರುತ್ತದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ನಾಸಿರ್ ಮೊಹಿದಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News