ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ : ಆಳ್ವಾಸ್, ಎಸ್‌ಡಿಎಂ ವಿನ್ನರ್ಸ್
ಮೂಡಬಿದಿರೆ,ಸೆ.17: ಮೂಡುಬಿದಿರೆ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದ ಯುವಕರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಪಿಯು ಕಾಲೇಜು ತಂಡ ಹಾಗೂ ಯುವತಿಯರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ್ದ ಎಸ್‌ಡಿಎಂ ಪಿಯು ಕಾಲೇಜಿನ ತಂಡ ವಿನ್ನರ್ಸ್ ಆಗಿ ಮೂಡಿಬಂದಿದೆ.
ಯುವಕರ ವಿಭಾಗದಲ್ಲಿ ಮಂಗಳೂರು ನಗರ ತಂಡವನ್ನು ಪ್ರತಿನಿಧಿಸಿದ್ದ ವಿಕಾಸ್ ಕಾಲೇಜು ಹಾಗೂ ಯುವತಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ್ದ ಆಳ್ವಾಸ್ ತಂಡ ದ್ವಿತೀಯ ಸ್ಥಾನಿಯಾಗಿದೆ.
ಯುವಕರ ಸೆಮಿಫೈನಲ್‌ನಲ್ಲಿ ಮಂಗಳೂರು ಗ್ರಾಮಾಂತರ ತಂಡವು ಬೆಳ್ತಂಗಡಿ ತಂಡವನ್ನು ಹಾಗೂ ಮಂಗಳೂರು ನಗರ ತಂಡ ಬಂಟ್ವಾಳ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದವು.
ಯುವತಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಮಂಗಳೂರು ಗ್ರಾಮಾಂತರ ತಂಡವು ಮಂಗಳೂರು ನಗರ ಹಾಗೂ ಬೆಳ್ತಂಗಡಿ ತಂಡವು ಬಂಟ್ವಾಳ ತಂಡವನ್ನು ಸೋಲಿಸಿ ಫೈನಲ್‌ಗೇರಿತು.
ಫೈನಲ್‌ನಲ್ಲಿ ಮಂಗಳೂರು ಗ್ರಾಮಾಂತರ ತಂಡವು, ಮಂಗಳೂರು ನಗರ ತಂಡದ ವಿರುದ್ಧ 25-18, 23-25, 25-20 ಅಂತರದಲ್ಲಿ ಜಯಗಳಿಸಿತು. ಮಹಿಳೆಯರ ವಿಭಾಗದಲ್ಲಿ 25-10, 20-23ದ ನೇರ ಸೆಟ್‌ಗಳಿಂ ಬೆಳ್ತಂಗಡಿ ತಂಡವು ಮಂಗಳೂರು ನಗರ ತಂಡದ ವಿರುದ್ಧ ಜಯ ಗಳಿಸಿತು.
ಯುವಕರ ವಿಭಾಗದಲ್ಲಿ ಆಳ್ವಾಸ್‌ನ ಶಿವು ಬೆಸ್ಟ್ ಅಟೆಕರ್, ಅದೇ ಸಂಸ್ಥೆಯ ಧನುಷ್ ಬೆಸ್ಟ್ ಪಾಸೆರ್ , ಮಂಗಳೂರು ನಗರದ ತಂಡದ ಮಾನಸ್ ಬೆಸ್ಟ್ ಅಲ್ರೌಂಡರ್ ಪ್ರಶಸ್ತಿಯನ್ನು ಪಡೆದರು. ಮಹಿಳೆಯರ ವಿಭಾಗದಲ್ಲಿ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯರಾದ ಯಶೋಧ-ಬೆಸ್ಟ್ ಪಾಸೆರ್, ಸಾಲಿಯತ್ ಬೆಸ್ಟ್ ಅಟ್ಯಾಕರ್ ಹಾಗೂ ಆಳ್ವಾಸ್‌ನ ವಾಣಿ ಬೆಸ್ಟ್ ಅಲ್ರೌಂಡರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಮೂಡುಬಿದಿರೆ ರೋಟರಿ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಐಕೇರ್ ಸಂಸ್ಥೆಯ ಮುಖ್ಯಸ್ಥ ಅಶ್ವಿನ್ ಪಿರೇರಾ, ಉದ್ಯಮಿ ರೋಹನ್ ರಾಜೇಶ್ ಮೆಂಡಿಸ್, ಎಸ್‌ಡಿಎಂ ಪಿಯು ಕಾಲೇಜಿನ ಪ್ರಾಂಶುಪಾಲ ಎನ್.ಡಿ ಚೌಟ, ಅಬಾಕಸ್ ನಿರ್ದೇಶಕ ಗುರುರಾಜ್ ಬಹುಮಾನ ವಿತರಿಸಿದರು. ರೋಟರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತಾ, ಆಡಳಿತಾಧಿಕಾರಿ ಶುಭಾಕರ ಅಂಚನ್, ದೈಹಿಕ ಶಿಕ್ಷಣ ನಿರ್ದೇಶಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮೂಡುಬಿದಿರೆ ರೋಟರಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು.