×
Ad

ಅಮೆರಿಕಕ್ಕೆ ಮಾದಕವಸ್ತು ಸಾಗಣೆ: ಏರ್‌ಇಂಡಿಯಾ ಸಿಬ್ಬಂದಿ ಬಂಧನ

Update: 2016-09-17 23:55 IST

  ಹೊಸದಿಲ್ಲಿ, ಸೆ.17: ಅಮೆರಿಕಕ್ಕೆ ಸುಮಾರು 300 ಬಾಟಲಿಗಳಲ್ಲಿ ನಿಷೇಧಿತ ಮಾದಕ ವಸ್ತುವನ್ನು ಸಾಗಿಸಲು ಯತ್ನಿಸಿದ ಆರೋಪದಡಿ ಏರ್‌ಇಂಡಿಯಾದ ಓರ್ವ ಸಿಬ್ಬಂದಿಯನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ .

    

ನ್ಯೂಯಾರ್ಕ್‌ಗೆ ಪ್ರಯಾಣಿಸಲು ಉದ್ದೇಶಿಸಿದ್ದ ಈ ಸಿಬ್ಬಂದಿಯನ್ನು ಕಸ್ಟಮ್ ಅಧಿಕಾರಿಗಳು ತನಿಖೆಗೆ ಒಳಪಡಿಸಿದಾಗ ‘ಫೆನ್ಸೆಡಿಲ್ ನ್ಯೂ ಕಾಫ್ ಲಿಂಟಸ್ ’ ಎಂಬ ನಿಷೇಧಿತ ಸಿರಪ್‌ನ 300 ಬಾಟಲಿಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಕೆಮ್ಮಿನ ಸಿರಪ್ ಮಾದಕ ವ್ಯಸನಿಗಳು ಬಳಸುವ ನಿಷೇಧಿತ ಪದಾರ್ಥವನ್ನು ಹೊಂದಿದೆ ಎಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಕಸ್ಟಮ್ಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಏರ್‌ಇಂಡಿಯಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News