×
Ad

ಪುಲಿಟ್ಝರ್ ಪ್ರಶಸ್ತಿ ವಿಜೇತ ನಾಟಕಕಾರ ಎಡ್ವರ್ಡ್ ನಿಧನ

Update: 2016-09-18 00:26 IST

ನ್ಯೂಯಾರ್ಕ್, ಸೆ. 17: ಪುಲಿಟ್ಝರ್ ಪ್ರಶಸ್ತಿ ವಿಜೇತ ಅಮೆರಿಕದ ನಾಟಕಕಾರ ಎಡ್ವರ್ಡ್ ಆ್ಯಲ್ಬೀ ಶುಕ್ರವಾರ ನಿಧನರಾಗಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ಕಾಯಿಲೆಪೀಡಿತರಾಗಿದ್ದ ಅವರು ನ್ಯೂಯಾರ್ಕ್‌ನ ಮೊನ್‌ಟಾಕ್‌ನಲ್ಲಿರುವ ತನ್ನ ಮನೆಯಲ್ಲಿ ನಿಧನರಾದರು ಎಂದು ಅವರ ಆಪ್ತ ಸಹಾಯಕ ಜಾಕೋಬ್ ಹೋಲ್ಡರ್ ತಿಳಿಸಿದರು ಎಂದು ಪತ್ರಿಕೆ ತಿಳಿಸಿದೆ.
ಅವರ ‘ಹೂ ಈಸ್ ಅಫ್ರೇಡ್ ಆಫ್ ವರ್ಜೀನಿಯ ವುಲ್ಫ್’ ಭಾರೀ ಪ್ರಸಿದ್ಧಿ ಪಡೆದ ನಾಟಕವಾಗಿದ್ದು, ಬಳಿಕ ಹಾಲಿವುಡ್ ಚಿತ್ರವಾಯಿತು. ಚಿತ್ರದಲ್ಲಿ ರಿಚರ್ಡ್ ಬರ್ಟನ್ ಮತ್ತು ಎಲಿಝಬೆತ್ ಟೇಲರ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News