×
Ad

ಕೇಜ್ರಿವಾಲ್ ನಾಲಗೆ ಶಸ್ತ್ರಚಿಕಿತ್ಸೆ ಬಗ್ಗೆ ಜಾರಿದ ಪಾರಿಕ್ಕರ್ ನಾಲಗೆ

Update: 2016-09-18 09:00 IST

ಪಣಜಿ, ಸೆ.18: "ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವಷ್ಟು ಉದ್ದ ಬೆಳೆದಿರುವ ಕೇಜ್ರಿವಾಲ್ ಅವರ ನಾಲಗೆ ಕತ್ತರಿಸಬೇಕಾಗಿ ಬಂದಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಾಲಗೆ ಶಸ್ತ್ರಚಿಕಿತ್ಸೆ ಬಗ್ಗೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅಣಕವಾಡಿದ್ದಾರೆ.
ಇದೇ ವೇಳೆ "ಸಿಕ್ ಲೀವ್" ಮೇಲಿರುವ ಕೇಜ್ರಿ ಬಗ್ಗೆ ಅನುಕಂಪವನ್ನೂ ವ್ಯಕ್ತಪಡಿಸಿದ್ದಾರೆ. "ಅವರ ನಾಲಿಗೆ ಉದ್ದವಾಗಿ ಬೆಳೆದಿರುವುದರಿಂದ ದೆಹಲಿಯಲ್ಲಿ ಮೋದಿ ವಿರುದ್ಧ ಹಾಗೂ ಇಲ್ಲ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಇದೀಗ ನಾಲಗೆ ಕತ್ತರಿಸಲಾಗುತ್ತಿದೆ" ಎಂದು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವ್ಯಂಗ್ಯವಾಡಿದರು.
ದೆಹಲಿಯಲ್ಲಿ ಚಿಕುನ್‌ಗುನ್ಯ ವ್ಯಾಪಕವಾಗಿ ಹರಡಿರುವ ಸಂದರ್ಭದಲ್ಲಿ ಆಪ್ ನಾಯಕರು ರಾಜ್ಯದಿಂದ ಹೊರಗಿದ್ದಾರೆ ಎಂದು ಅವರು ಟೀಕಿಸಿದರು. ನಿಮ್ಮ ಮೊಹಲ್ಲಾ ಕ್ಲಿನಿಕ್‌ಗಳು ಪರಿಣಾಮಕಾರಿಯಾಗಿದ್ದರೆ, ಚಿಕುನ್‌ಗುನ್ಯದಿಂದ 40 ಮಂದಿ ಹೇಗೆ ಸತ್ತರು ಎಂದು ಪ್ರಶ್ನಿಸಿದ ಅವರು, "ಈ ಘಟನೆ ಬಳಿಕ ಆಪ್ ಮುಖಂಡರ ಸುಳ್ಳು ಬಹಿರಂಗವಾಗಿದೆ" ಎಂದು ಹೇಳಿದರು.
ದೆಹಲಿ ಜನತೆಗೆ ವಂಚಿಸಿದ ಬಳಿಕ ಇದೀಗ ಆಪ್ ಮುಖಂಡರು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜತೆಗೆ ಫಿನ್‌ಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದಾರೆ. ಆಪ್‌ಗೆ ಎಲ್ಲಿಂದ ಹಣ ಬರುತ್ತದೆ? ಕೇವಲ ಜಾಹೀರಾತಿಗೇ 26.82 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News