×
Ad

ತಾಳಿತ್ತನೂಜಿ: ಎಸ್ಸೆಸ್ಸೆಫ್ ಯುನಿಟ್ ಲೀಡರ್ಸ್‌ ಕ್ಯಾಂಪ್

Update: 2016-09-18 09:19 IST

ವಿಟ್ಲ, ಸೆ.18: ಎಸ್ಸೆಸ್ಸೆಫ್ ಮಂಗಳಪದವು ಸೆಕ್ಟರ್‌ನ ಯುನಿಟ್ ಲೀಡರ್ಸ್‌ ಕ್ಯಾಂಪ್ ಇತ್ತೀಚೆಗೆ ತಾಳಿತ್ತನೂಜಿ ಮದ್ರಸ ಹಾಲ್‌ನಲ್ಲಿ ಜರಗಿತು.
  ವಿ.ಎಂ.ಅಬೂಬಕರ್ ಸಖಾಫಿ ಶಿಬಿರವನ್ನು ಉದ್ಘಾಟಿಸಿದರು. ರಝಾಕ್ ಸಖಾಫಿ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಅಧ್ಯಕ್ಷ ಎಂ.ಕೆ.ಎಂ.ಅಬೂಬಕರ್ ಕಾಮಿಲ್ ಸಖಾಫಿ ಕೊಡುಂಗಾಯಿ ಮತನಾಡಿ, ಗಾಂಜಾ, ಅಫೀಮು ಮೊದಲಾದ ಅಮಲು ಪದಾರ್ಥಗಳ ದಾಸರಾಗುತ್ತಿರುವ ಯುವ ಸಮೂಹವು ನೈತಿಕತೆಯನ್ನು ಬೋಧಿಸುವ ಸಂಘಟನೆಗಳತ್ತ ಹೆಜ್ಜೆ ಹಾಕುವಂತಾಗಬೇಕು ಎಂದು ಕರೆ ನೀಡಿದರು. ಇದೇ ಇಶಾರ ಅಭಿಯಾನದ ಬಗ್ಗೆ ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಮಾತನಾಡಿದರು. ಶಾಖಾ ಸಬಲೀಕರಣದ ಕುರಿತು ಎಸ್ಸೆಸ್ಸೆಫ್ ರಾಜ್ಯ ನಾಯಕ ಇಸ್ಮಾಯೀಲ್ ಮಾಸ್ಟರ್ ಮಂಗಲಪದವು ತರಗತಿ ನೀಡಿದರು.
ಸೌತ್ ಸೆಕ್ಟರ್ ಅಧ್ಯಕ್ಷ ಶರಫಿ ಉಸ್ತಾದ್, ಅಬೂಬಕರ್ ಅಝ್ಹರಿ, ಮಾತನಾಡಿದರು.
   ಡಿವಿಷನ್ ನಾಯಕರಾದ ರಹೀಂ ಸಖಾಫಿ, ಎನ್.ಕೆ.ಖಾದರ್ ಸಅದಿ, ಸಿದ್ದೀಕ್ ಮಿಸ್ಬಾಹಿ, ಹಮೀದ್ ಮದನಿ ಕಾಂತಡ್ಕ, ಹಮೀದ್ ಉಕ್ಕುಡ, ರಝಾಕ್ ಪೆಲ್ತಡ್ಕ, ಅಝೀಝ್ ಮದನಿ ಮಂಗಲಪದವು, ಫಾರೂಕ್ ಕೋಡಪದವು, ಸೆಕ್ಟರ್ ನಾಯಕರು ಹಾಗೂ ಪ್ರತೀ ಶಾಖೆಯ 70ಕ್ಕೂ ಅಧಿಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೆಕ್ಟರ್ ಕಾರ್ಯದರ್ಶಿ ಹನೀಫ್ ಸಖಾಫಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News