×
Ad

ಜಮ್ಮುವಿನಲ್ಲಿ ಸೇನಾ ಕಚೇರಿ ಮೇಲೆ ಉಗ್ರರ ದಾಳಿ; 17 ಸೈನಿಕರು ಬಲಿ

Update: 2016-09-18 09:34 IST

ಶ್ರೀನಗರ, ಸೆ.18: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ಉಗ್ರರು  ದಾಳಿ ನಡೆಸಿದ ಪರಿಣಾಮವಾಗಿ  17 ಯೋಧರು ಹುತಾತ್ಮರಾಗಿದ್ದು, 19ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ.

ಗಾಯಗೊಂಡ ಯೋಧರ ಪೈಕಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಉಗ್ರರ ತಂಡವೊಂದು ಇಂದು ಬೆಳಿಗ್ಗೆ 5.30ರ ಸುಮಾರಿಗೆ 12ನೆ ಆರ್ಮಿ ಬ್ರಿಗೇಡ್‌ನ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದ್ದು, ಕಚೇರಿಯ ಒಳಭಾಗದಲ್ಲಿ ಬಾಂಬ್ ಸ್ಫೋಟಿಸಿದ್ದಾರೆಂದು  ತಿಳಿದುಬಂದಿದೆ.

ಸೇನಾ ಕಚೇರಿಯೊಳಗೆ ಮೊದಲು ಆತ್ಮಾಹುತಿ ದಾಳಿ ನಡೆದಿದೆ. ಬಳಿಕ ಉಗ್ರರು ಮನಸೋ ಇಚ್ಛೆ ಫೈರಿಂಗ್ ನಡೆಸಿದ್ದಾರೆ.ಸೇನಾ ಕಚೇರಿಯ ಪಕ್ಕದ ಟೆಂಟ್ ಗೆ ಉಗ್ರರು ಗ್ರೇನೆಡ್ ದಾಳಿ ನಡೆಸಿ ಯೋಧರ ಸಾವಿಗೆ ಕಾರಣರಾದರು.

ಉಗ್ರರ ವಿರುದ್ಧ  ಸೇನೆ ಕಾರ್ಯಾಚರಣೆಗಳಿದಿದ್ದು,  ನಾಲ್ವರು ಉಗ್ರರನ್ನು ಗಡಿಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಗೊತ್ತಾಗಿದೆ.  ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದು ನಾಲ್ವರು ಉಗ್ರರು ಸತ್ತು ನೆಲಕ್ಕುರುಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News