×
Ad

ಸಮುದ್ರಕ್ಕೆ ಸ್ನಾನಕ್ಕಿಳಿದ ಯುವಕ ನಾಪತ್ತೆ

Update: 2016-09-18 11:20 IST

ಕಾಸರಗೋಡು, ಸೆ.18: ಸ್ನೇಹಿತರ ಜೊತೆ ಸಮುದ್ರಕ್ಕೆ ಸ್ನಾನಕ್ಕಿಳಿದ ಯುವಕನೋರ್ವ ನಾಪತ್ತೆಯಾದ ಘಟನೆ ಕಾಸರಗೋಡು ನೆಲ್ಲಿಕುಂಜೆ ಲೈಟ್‌ಹೌಸ್ ಬಳಿ ಇಂದು ಬೆಳಗ್ಗೆ ನಡೆದಿದೆ.
  ಲೈಟ್‌ಹೌಸ್‌ನ ನಿಮಿಷ್(20) ನಾಪತ್ತೆಯಾದ ಯುವಕ. ಇಬ್ಬರು ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ನಿಮಿಷ್ ಸಮುದ್ರಪಾಲಾಗಿದ್ದಾರೆ. ಉಳಿದ ಇಬ್ಬರು ಪಾರಾಗಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News