ವಿದ್ಯಾಬಾಲನ್‌ಗೆ ಡೆಂಗ್: ಶಾಹಿದ್ ಕಪೂರ್‌ಗೆ ನೋಟಿಸ್
ಮುಂಬೈ,ಸೆ. 18: ನಟಿ ವಿದ್ಯಾಬಾಲನ್‌ಗೆ ಡೆಂಗ್ ಜ್ವರವಿರುವುದು ದೃಢವಾಗಿದೆ. ಈಗ ಅವರಿಗೆ ಮನೆಯಲ್ಲಿ ತೀವ್ರನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬ್ರಹ್ಮನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಶುಕ್ರವಾರ ಶಾಹಿದ್ ಕಪೂರ್ ಸಹಿತ ವಿದ್ಯಾರ ಇಬ್ಬರ ನೆರೆ ಮನೆಯವರಿಗೆ ನೋಟಿಸ್ ಕಳುಹಿಸಿತು ಎಂದು ವರದಿಯಾಗಿದೆ.
ಕಾರಣ, ಈಡಿಸ್ ಈಜಿಪ್ತಿ ಸೊಳ್ಳೆಗಳ ಪ್ರಜನನ ತಡೆಯಲು ವಿಫಲವಾಗಿದ್ದಾರೆ ಎಂದು ನೋಟಿಸ್ ನೀಡಲಾಗಿದ್ದು, ಬಿಎಂಸಿ ಕೀಟನಾಶಕ ಇಲಾಖೆ ನಡೆಸಿದ ತಪಾಸಣೆಯಲ್ಲಿ ಶಾಹಿದ್‌ರ ಬಳಕೆಯಿಲ್ಲದ ಈಜುಕೊಳದಲ್ಲಿ ಸೊಳ್ಳೆಗಳ ಅಭಿವೃದ್ಧಿ ಯಾಗಿದ್ದು ಎಂದು ಪತ್ತೆಯಾಗಿತ್ತು. ಪ್ರಣೇತ ಅಪಾರ್ಟ್‌ಮೆಂಟ್‌ನ ವಿದ್ಯಾರ ಪ್ಲಾಟ್‌ಗಿಂತ ಎರಡು ಮಹಡಿಕೆಳಗಿ ನ ಪ್ಲಾಟ್‌ನಲ್ಲಿ ಶಾಹಿದ್ ವಾಸಿಸುತ್ತಿದ್ದಾರೆ. 382ನೆ ಸೆಕ್ಷನ್ ಪ್ರಕಾರ ನೋಟಿಸ್ ಸಿಕ್ಕಿದ ಇಬ್ಬರೂ 10,000 ರೂಪಾಯಿ ದಂಡ ತೆರಬೇಕಾಗುತ್ತದೆ.ಸೆಪ್ಟಂಬರ್ ತಿಂಗಳಲ್ಲಿ ನಗರದ ವಿವಿಧ ಆಸ್ಪತ್ರೆಗಳಿಗೆ ಡೆಂಗ್ ಜ್ವರ ಬಾಧಿಸಿದ 1500 ಮಂದಿಯನ್ನು ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.