ಈಗ ಆಮ್ ಆದ್ಮಿಯ ಮಹಿಳಾ ಶಾಸಕಿ ವಿರುದ್ಧ ಆರೋಪ
ಹೊಸದಿಲ್ಲಿ,ಸೆ. 18: ದಿಲ್ಲಿಯ ಆಪ್ ಸರಕಾರದ ಸಂಕಷ್ಟ ಹೆಚ್ಚುವುದಲ್ಲದೆ ಕಡಿಮೆಗೊಳ್ಳುವುದ ಕಾಣಿಸುತ್ತಿಲ್ಲ. ಈಗ ಆಮ್ ಆದ್ಮಿಸರಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪ ಹೊರಿಸುವುದೇನೋ ಸಹಜ. ಆದರೆ ಇದೀಗ ಆಮ್ ಆದ್ಮಿಪಾರ್ಟಿಯ ಶಾಸಕಿ ಸರಿತಾ ಸಿಂಗ್ ವಿರುದ್ಧ ಲಂಚ ಪಡೆದಿದ್ದಾರೆ ಎಂದು ಆಮ್‌ಆದ್ಮಿಯ ಕಾರ್ಯಕರ್ತರೇ ಆರೋಪ ಹೊರಿಸಿದ ಘಟನೆ ವರದಿಯಾಗಿದೆ.
ಪಾರ್ಟಿಕಾರ್ಯಕರ್ತರು ಸರಿತಾ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಒಂಬತ್ತು ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ರೋಹ್‌ತಾಶ್ ನಗರದ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಶಕೀಲ್ ಅಹ್ಮದ್ ಸರಿತಾ ವಿರುದ್ಧ ದೂರು ನೀಡಿದ್ದಾರೆ
ಸ್ಪಷ್ಟೀಕರಣ ನೀಡಿದ ಶಾಸಕಿ:
ಶಾಸಕಿ ಸರಿತಾ ಸಿಂಗ್ ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಯತ್ನ ನಡೆಯುತ್ತಿದೆ ಎಂದು ಮಾನಸರೋವರ್ ಪಾರ್ಕ್‌ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಶಕೀಲ್ ಪಾರ್ಟಿಯಲ್ಲಿ ವಿದ್ಯುತ್ ಸಂಬಂಧಿಸಿದ ಕೆಲಸ ಮಾಡಿಸುತ್ತಿದ್ದರು. ಏನೋ ಎಡವಟ್ಟುಮಾಡಿಕೊಂಡು ಸಿಕ್ಕಿಬಿದ್ದಿದ್ದರು. ಎಂದು ದೂರಿನಲ್ಲಿ ಸರಿತಾ ಹೇಳಿದ್ದಾರೆ. ಸರಿತಾ ಸಿಂಗ್ ಹೇಳಿರುವ ಪ್ರಕಾರ ಶಕೀಲ್‌ರನ್ನು ಆಮ್ ಆದ್ಮಿ ಪಾರ್ಟಿಯಿಂದ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.