ಜೇನ್‌ಏರ್ ಕಾದಂಬರಿ ಬಿಡುಗಡೆ
ಮಂಗಳೂರು, ಸೆ.18: ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಆಂಗ್ಲ ಲೇಖಕಿ ಶಾಲೆಟ್ ಬ್ರಾಂಟಿಯ ಕಾದಂಬರಿ ಕೃತಿಯ ಕನ್ನಡಾನುವಾದ ಜೇನ್‌ಏರ್‌ನ ಬಿಡುಗಡೆ ಸಮಾರಂಭ ಕರಾವಳಿ ಲೇಖಕಿಯರ ವಾಚಕರ ಸಂಘದ ಸಾಹಿತ್ಯ ಸದನದಲ್ಲಿ ನಡೆಯಿತು.
ಕಾದಂಬರಿಕಾರ ಕೆ.ಟಿ.ಗಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೇನ್‌ಏರ್ ಕೃತಿ ಜನಪ್ರಿಯ ಶ್ರೇಷ್ಠ ಕೃತಿ. ಈ ಕೃತಿಯನ್ನು ಅನುವಾದ ಮಾಡಿದ ಲೇಖಕಿ ತಪಸ್ಸು ಮಾಡಿದ್ದಾರೆ. ತಾಳ್ಮೆ, ತಪಸ್ಸು ಮಾಡಿ ಅನುವಾದ ಮಾಡಿದ ಲೇಖಕಿ ಶ್ಯಾಮಲ ಮಾಧವ ಅವರು ಅಭಿನಂದನಾರ್ಹರು ಎಂದು ಹೇಳಿದರು.
ಪುಸ್ತಕ ವ್ಯಾಮೋಹವಿದ್ದರೆ ಮನುಷ್ಯ ಬುದ್ಧಿವಂತನಾಗಿ, ಪ್ರಜ್ಞಾವಂತನನ್ನಾಗಿ ಮಾಡುತ್ತದೆ. ಇದೇ ಪುಸ್ತಕ ವ್ಯಾಮೋಹದಲ್ಲಿ ಅನುವಾದ ಮಾಡಿದ ಈ ಕೃತಿಯಲ್ಲಿ ಅದ್ಭುತವಾಗಿ ಶಬ್ದ ಪ್ರಯೋಗವಿದೆ ಎಂದರು.
ಈ ಸಂದರ್ಭದಲ್ಲಿ ಕಾದಂಬರಿ ಅನುವಾದಗೊಳಿಸಿದ ಶ್ಯಾಮಲಾ ಮಾಧವ, ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷೆ ಶೈಲ, ಲೇಖಕಿ ಭಾರತಿ ಶೇವ್ಗೆರು ಉಪಸ್ಥಿತರಿದ್ದರು.
ಬಿ.ಎಂ. ರೋಹಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಚೇಳ್ಯಾರು ಕಾರ್ಯಕ್ರಮ ನಿರೂಪಿಸಿದರು.