×
Ad

ಬೆಟ್ಟಂಪಾಡಿ ಕಾಲೇಜಿನಲ್ಲಿ ಓಣಂ ಆಚರಣೆ

Update: 2016-09-18 18:36 IST

ಪುತ್ತೂರು, ಸೆ.18: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಸಾಮರಸ್ಯದ ಹಬ್ಬವಾಗಿ ಓಣಂ ಹಬ್ಬವನ್ನು ಕಾಲೇಜ್‌ನಲ್ಲಿ ಆಚರಿಸಲಾಯಿತು.

ಮಹಾಬಲಿಯ ವೇಷಧಾರಿಯನ್ನೊಳಗೊಂಡ ವರ್ಣರಂಜಿತ ಮೆರವಣಿಗೆಯ ಬಳಿಕ ವಿದ್ಯಾರ್ಥಿಗಳು ರಚಿಸಿದ ಪೂಕಳಂ ರಂಗವಲ್ಲಿಯ ಎದುರು ದೀಪ ಬೆಳಗಿಸಿ ಓಣಂ ಆಚರಣೆಯನ್ನು ಉದ್ಘಾಟಿಸಲಾಯಿತು.

ಉದ್ಘಾಟನೆಗೈದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಓಣಂನ ಹಿನ್ನೆಲೆಯನ್ನು ವಿವರಿಸಿ, ಇಂದಿನ ಕಾಲಕ್ಕೂ ಇಂತಹ ಆಚರಣೆಗಳು ಪಡೆದುಕೊಳ್ಳುವ ಮಹತ್ವವನ್ನು ವಿವರಿಸಿದರು. ಬಳಿಕ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ವಿದ್ಯಾರ್ಥಿ ನಾಯಕರುಗಳಾದ ಹರ್ಷಿತಾ ರೈ, ಸುರೇಶ್, ಅಕ್ಷತಾ ಮುಂತಾದವರು ನೇತೃತ್ವ ವಹಿಸಿದ್ದರು. ದೈಹಿಕ ಶಿಕ್ಷಕ ಎವೆರೆಸ್ಟ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News