ವಿದುಷಿ ಪ್ರೀತಿಕಲಾರಿಂದ ನೃತ್ಯಾಂತರಂಗ- 16
Update: 2016-09-18 18:48 IST
ಪುತ್ತೂರು, ಸೆ.18: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ವತಿಯಿಂದ ನಡೆದ ‘ನೃತ್ಯಾಂತರಂಗ’ದ 16ನೆ ಸರಣಿಯನ್ನು ವಿದುಷಿ ಪ್ರೀತಿಕಲಾ ನಡೆಸಿಕೊಟ್ಟರು.
ಶನಿವಾರ ಪುತ್ತೂರು ನಗರದ ದರ್ಬೆಯ ‘ಶಶಿಶಂಕರ’ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿದ್ವಾನ್ ರಾಮಕೃಷ್ಣ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ವಿದುಷಿ ಪ್ರೀತಿಕಲಾರಿಂದ ಭರತನಾಟ್ಯ ನಡೆಯಿತು.
ಈ ಸಂದರ್ಭದಲ್ಲಿ ಅಪೂರ್ವ ದೇವಸ್ಯರಿಂದ ‘ಪುಷ್ಪಾಂಜಲಿ’ ನೃತ್ಯಬಂಧದ ಬಗ್ಗೆ ಉಪನ್ಯಾಸ ನಡೆಯಿತು. ಸಿಂಧೂರಲಕ್ಷ್ಮಿ ಕನ್ನೆಪ್ಪಾಡಿ ಪ್ರೀತಿಕಲಾ ಅವರ ಪರಿಚಯವನ್ನು ಮಾಡಿದರು. ಪೋಷಕರ ಪರವಾಗಿ ಇಂದಿರಾ ಸಂತೋಷ್ ಇವರು ಅನುಭವ ಹಂಚಿಕೊಂಡರು. ಕಾರ್ಯಕ್ರಮವನ್ನು ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್ ನಿರೂಪಿಸಿದರು.