ಅಲ್ ಹಖ್ ಫೌಂಡೇಶನ್‌ನಿಂದ ಸದಸ್ಯರ ಕೂಟ
ಮಂಗಳೂರು, ಸೆ.18: ಮಂಗಳೂರಿನ ಅಲ್ ಹಖ್ ಫೌಂಡೇಶನ್ ವತಿಯಿಂದ ಶನಿವಾರ ಮಂಗಳೂರಿನ ಬಾಂಬೆ ಹೋಟೆಲ್ ಸಭಾಂಗಣದಲ್ಲಿ ಸದಸ್ಯರ ಕೂಟ ನಡೆಯಿತು.
‘ಅಲ್ ಹಖ್ ಫೌಂಡೇಶನ್’ನ ಸಂಸ್ಥಾಪಕ ಬಿ.ಎಸ್. ಇಮ್ತಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸೌದಿ ಅರೇಬಿಯಾದ ಉದ್ಯಮಿ ಬಶೀರ್ ಸಾಗರ್ ಹಾಗೂ ಎಸ್‌ಕೆಎಸ್‌ಎಂನ ಅಬೂಬಕರ್ ಪಾಂಡೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನ ಸದಸ್ಯ ಅಬ್ದುಲ್ಲತೀಫ್ ಕುದ್ರೋಳಿ ಫೌಂಡೇಶನ್‌ನ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಅಬ್ದುಸ್ಸಮದ್ ಆಯವ್ಯಯ ಮಂಡಿಸಿದರು. ಸಂಸ್ಥಾಪಕ ಬಿ.ಎಸ್. ಇಮ್ತಿಯಾಝ್ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಮರ್ ಫಾರೂಕ್, ಅಬ್ದುರ್ರವೂಫ್, ಮುಹಮ್ಮದ್ ಅಶ್ರಫ್, ಸಲೀಂ ಪಾಂಡೇಶ್ವರ, ಅನೀಸ್, ನಾಸಿರ್ ಎಂ.ಕೆ., ಬಿ.ಎಸ್. ಇಕ್ಬಾಲ್, ಮೂಸ ಫಾಝಿಲ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು. ರಾಹಿದ್ ಕುದ್ರೋಳಿ ಕಿರಾಅತ್ ಪಠಿಸಿದರು. ಪ್ರಧಾನ ಸದಸ್ಯ ಮುಹಮ್ಮದ್ ಸಾಲಿ ಕಾರ್ಯಕ್ರಮ ನಿರೋಪಿಸಿದರು. ಸದಸ್ಯ ಶರೀಫ್ ಮುಲ್ಕಿ ವಂದಿಸಿದರು.