ಸಿರಿಯ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಐಸಿಸ್ ಪೈಲಟ್ ಸಾವು
Update: 2016-09-18 22:57 IST
ಬೆರೂತ್, ಸೆ. 18: ಸಿರಿಯದ ಪೂರ್ವದ ನಗರ ಡಯರ್ ಅಲ್-ರೊರ್‌ನಲ್ಲಿ ಸೇನಾ ವಿಮಾನವೊಂದನ್ನು ಐಸಿಸ್ ಹೊಡೆದುರುಳಿಸಿದೆ ಎಂದು ಭಯೋತ್ಪಾದಕ ಸಂಘಟನೆಗೆ ಸೇರಿದ ವಾರ್ತಾಸಂಸ್ಥೆ ಅಮಾಕ್ ರವಿವಾರ ತಿಳಿಸಿದೆ.
‘‘ಸಿರಿಯ ಸರಕಾರಕ್ಕೆ ಸೇರಿದ ವಿಮಾನವೊಂದನ್ನು ಡಯರ್ ಅಲ್ ರೊರ್‌ನಲ್ಲಿ ಐಸಿಸ್ ಹೋರಾಟಗಾರರು ಹೊಡೆದುರುಳಿಸಿದ್ದಾರೆ’’ ಎಂದು ಆನ್‌ಲೈನ್ ಹೇಳಿಕೆಯೊಂದರಲ್ಲಿ ಅಮಾಕ್ ಹೇಳಿದೆ.
ಮಿಗ್ ಸಿರಿಯ ಯುದ್ಧ ವಿಮಾನದ ಪೈಲಟ್ ಮೃತಪಟ್ಟಿದ್ದಾರೆ ಎಂದು ಸಿರಿಯದ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಸರಕಾರದ ನಿಯಂತ್ರಣದಲ್ಲಿರುವ ಡಯರ್ ಅಲ್ ರೊರ್ ವಿಮಾನ ನಿಲ್ದಾಣ ಎದುರುಗಡೆಯ ಜೆಬೆಲ್ ತರ್ಡ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಅದು ತಿಳಿಸಿದೆ.