ಮಳ್‌ಹರ್ ಉರೂಸ್ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಜೇಶ್ವರ, ಸೆ.18: ಮಳ್‌ಹರ್ ವಿದ್ಯಾಸಂಸ್ಥೆಯ ಶಿಲ್ಪಿಸೈಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ ಪೋಸೋಟ್ ತಂಙಳ್ ಮೊದಲನೆ ಉರೂಸ್ ಮುಬಾರಕ್ 14 ರಿಂದ 22ರವರೆಗೆ ನಡೆಯುತ್ತಿದ್ದು, ಐದನೆ ದಿನವಾದ ಇಂದು ಯೆನೆಪೊಯ ಮೆಡಿಕಲ್ ಕಾಲೇಜಿನ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಡಾ.ಅಬ್ದುಲ್ಲ ಕಾಞಂಗಾಡು ಉದ್ಘಾಟಿಸಿ ಮಾತನಾಡಿ, ಬಡ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಅಸಾಧ್ಯವಾದ ಕಾಲದಲ್ಲಿ ಇಂತಹ ಶಿಬಿರಗಳು ಉಪಯುಕ್ತ ಎಂದು ಅಭಿಪ್ರಾಯಪಟ್ಟರು.
ಜಾಮಿಯ್ಯ ಸದಿಯ್ಯ ಪ್ರೊ.ಉಬೈದುಲ್ಲಾ ಸಅದಿ ನದ್ವಿ ಅಧ್ಯಕ್ಷತೆ ವಹಿಸಿದರು.
ಸೈಯದ್ ಅಹ್ಮದ್ ಜಲಾಲುದ್ದೀನ್‌ನ ಸಅದಿ ಅಲ್‌ಬುಖಾರಿ, ದಯಾನಂದ, ಡಾ.ರಿಷಾದ್, ಡಾ.ಮಜೀದ್, ಡಾ.ಶಫೀಲ್ ತಲಪ್ಪಾಡಿ, ಅಬ್ದುರ್ರಝಾಕ್, ಹಸನ್‌ಕುಂಞಿ, ಮೊದೀನ್ ಮಾಸ್ಟರ್, ಅಬ್ದುಲ್ ಹಮೀದ್ ಮೊಗ್ರಾಲ್ ಮುಂತಾದವರು ಭಾಗವಹಿಸಿದರು.
ಸಿಂಾದ್ ಮಾಸ್ಟರ್ ಮುಟ್ಟಂ ಸ್ವಾಗತಿಸಿದರು. ಹಮೀದ್ ಮಾಸ್ಟರ್ ವಂದಿಸಿದರು.
ಮಧ್ಯಾಹ್ನ ನಡೆದ ಮುತಲ್ಲಿಂ ಜಲ್ಸಾವನ್ನು ಬೆಳ್ಳಿಪ್ಪಾಡಿ ಅಬದುಲ್ಲ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ದಾರುಲ್‌ಅಶ್-ಅರಿಯ್ಯದ ಪ್ರೊ.ಪಿ.ಎ. ಅಬ್ದುಲ್ಲಾ ಬಾಖವಿ ಜುನೈದಿ ಉದ್ಘಾಟಿಸಿದರು.
ಸೈಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ, ಸೈಯದ್ ಅಹ್ಮದ್ ಜಲಾಲುದ್ದೀನ್‌ನ ಸಅದಿ ಅಲ್ -ಬುಖಾರಿ, ಸ್ವಾಲಿಹ್ ಸಅದಿ ತಲಿಪ್ಪರಂಬ, ಮೊಯ್ದು ಸಅದಿ ಚೇರೂರು,ಅಬ್ದುಲ್ಲಾ ಮುಸ್ಲಿಯಾರ್ ಬೊಲ್ಮಾರು,ಉಮರುಲ್ ಫಾರುಖ್ ಮದನಿ ಮಚ್ಚಂಪಾಡಿ, ಝರಿಯ್ಯ ಫೈಝಿಕೊಡಿಯಮ್ಮ, ಹಸನ್ ಸಅದಿ ಅಲ್-ಅಫ್ಝಲಿ, ಇಬ್ರಾಹೀಂ ಫೈಝಿ ಉದ್ಯಾವರ, ಮುಹಮ್ಮದ್ ಸಖಾಫಿ ತೋಕ್ಕೆ, ಹಾರಿಸ್ ಹಿಮಮಿ ಸಖಾಫಿ ಪರಪ್ಪ, ಉಮರ್ ಸಖಾಫಿ ಬೇೂರು ಮುಂತಾದವರು ಭಾಗವಹಿಸಿದರು. ಅಬ್ದುಸ್ಸಲಾಂ ಮಿಬಾಹಿ ಸ್ವಾಗತಿಸಿ ಮುಸ್ತಫ ಫಾಳಿಲಿ ವಂದಿಸಿದರು.