×
Ad

ಪಿಎನ್‌ಬಿ ಮೆಟ್‌ಲೈಫ್‌ನ ನೂತನ ಕಚೇರಿ ಉದ್ಘಾಟನೆ

Update: 2016-09-18 23:55 IST

ಬೆಂಗಳೂರು, ಸೆ.18: ದೇಶದ ಖಾಸಗಿಜೀವವಿಮಾದಾರರಲ್ಲಿ ಮುಂಚೂಣಿ ಯಲ್ಲಿರುವ ಪಿಎನ್‌ಬಿ ಮೆಟ್‌ಲೈಫ್‌ನ ಹೊಸ ನೋಂದಾಯಿತ ಕಚೇರಿಯು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿಂದು ಉದ್ಘಾಟನೆಗೊಂಡಿತು.
ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್ ನೂತನ ಕಚೇರಿಯನ್ನು ಉದ್ಘಾಟಿಸಿದರು.
 ಈ ಸಂದರ್ಭ ಕರ್ಣಾಟಕ ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ಎಂ.ಎಸ್.ಮಹಾಬಲೇಶ್ವರ ಭಟ್ ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನೋದ್ ಜೋಶಿ, ಪಿಎನ್‌ಬಿ ಮೆಟ್‌ಲೈಫ್‌ನ ಆಡಳಿತ ನಿರ್ದೇಶಕರು ಮತ್ತು ಕಾರ್ಯನಿರ್ವಹಣಾಧಿಕಾರಿ ತರುಣ್ ಚುಗ್ ಉಪಸ್ಥಿತರಿದ್ದರು.
  *ಪಿಎನ್‌ಬಿ ಮೆಟ್‌ಲೈಫ್ ಭಾರತದಲ್ಲಿ 2001ರಲ್ಲಿ ತನ್ನ ಸೇವಾ ಚಟುವಟಿಕೆಯನ್ನು ಆರಂಭಿಸಿದ್ದು, ಭಾರತದಾದ್ಯಂತ ಸುಮಾರು 140 ಕಡೆ ಅಸ್ತಿತ್ವದಲ್ಲಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್, ಜಮ್ಮು ಆ್ಯಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್ ಹಾಗೂ ಕರ್ಣಾಟಕ ಬ್ಯಾಂಕ್ 8,000ಕ್ಕಿಂತಲೂ ಅಧಿಕ ಶಾಖೆಗಳ ಮೂಲಕ ಗ್ರಾಹಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಬ್ಯಾಂಕ್ ಅಶ್ಯುರೆನ್ಸ್, ಏಜೆನ್ಸಿ ಮತ್ತು ಡೈರೆಕ್ಟ್ ಮಾರ್ಕೆಟಿಂಗ್ ಮುಖಾಂತರ ವಿಸ್ತೃತ ಶ್ರೇಣಿಯ ಸಂರಕ್ಷಣೆ, ಸಂಪತ್ತು ಕ್ರೋಢೀಕರಣ ಮತ್ತು ಸೇವಾ ನಿವೃತ್ತಿ ಉತ್ಪನ್ನಗಳನ್ನು ಒದಗಿಸುತ್ತಿದೆ. ಪಿಎನ್‌ಬಿ ಮೆಟ್‌ಲೈಫ್ ಸಹಯೋಗದೊಂದಿಗೆ ಕರ್ಣಾಟಕ ಬ್ಯಾಂಕ್ ಬೆಂಬಲದಲ್ಲಿ ಗಣನೀಯವಾದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳನ್ನು ಕೈಗೆತ್ತಿಕೊಂಡಿವೆ. ಈ ಸಂಸ್ಥೆಯು ಮಂಗಳೂರಿನಲ್ಲಿರುವ ಪ್ರಜ್ಞಾ ಸಂಸ್ಥೆಯೊಂದಿಗೆ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿದೆ. ಇದರಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳ 8 ತಾಲೂಕುಗಳಲ್ಲಿರುವ 80ಕ್ಕಿಂತಲೂ ಹೆಚ್ಚಿನ ಹಳ್ಳಿಗಳಲ್ಲಿರುವ 85 ಮಕ್ಕಳು ಫಲಾನುಭವಿಗಳಾಗಿದ್ದಾರೆ. ಸಂಸ್ಥೆಯೊಂದಿಗೆ ತನ್ನ ಸಿಎಸ್‌ಆರ್ ಉಪಕ್ರಮದಡಿ ಬ್ಯಾಡ್ಮಿಂಟನ್ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದು, ರಾಜ್ಯದಲ್ಲಿ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News