ಮಹಿಳೆಯರ ಶೀಲದ ಬಗ್ಗೆ ಮಾತ್ರ ಯಾಕೆ ಪ್ರಶ್ನೆ
ಮುಂಬೈ,ಸೆಪ್ಟಂಬರ್ 19: ಸಮಾಜದಲ್ಲಿ ಯಾವಾಗಲು ಮಹಿಳೆಯ ಕನ್ಯತ್ವ(ಶೀಲ) ಯಾಕೆ ಪ್ರಶ್ನಿಸಲ್ಪಡುತ್ತಿದೆ ಎಂದು ಅಮಿತಾ ಭ್ಬಚ್ಚನ್ ಪ್ರಶ್ನಿಸಿದ್ದಾರೆ. ತನ್ನ ಹೊಸ ಸಿನೆಮಾ 'ಪಿಂಕ್'ನ ಪ್ರಚಾರ ಕಾರ್ಯಕ್ರಮದಲ್ಲಿ ನಡೆದ ಒಂದು ಚರ್ಚೆಯ ವೇಳೆ ಅವರು ಪ್ರಶ್ನೆಯನ್ನು ಸಮಾಜಕ್ಕೆ ಎಸೆದಿದ್ದಾರೆಂದು ವರದಿಯಾಗಿದೆ.
ಕನ್ಯತ್ವಕ್ಕೆ ಸಂಬಂಧಿಸಿ ಮಹಿಳೆಯರು ಸಮಾಜದಲ್ಲಿ ಪ್ರಶ್ನಿಸಲ್ಪಡುತ್ತಿದ್ದಾರೆ. ಇದೇ ಪ್ರಶ್ನೆಯನ್ನು ಯಾಕೆ ಒಬ್ಬ ಪುರುಷನಲ್ಲಿ ಕೇಳುವುದಿಲ್ಲ. ಈ ವಿಷಯದಲ್ಲಿ ಗಂಡು ಹೆಣ್ಣಿಗೆ ಇರುವ ವ್ಯತ್ಯಾಸಗಳೇನು ಎಂದು ಬಚ್ಚನ್ ಕೇಳಿದ್ದಾರೆ.
ಓರ್ವ ಮಹಿಳೆ ಕನ್ಯೆಯಲ್ಲ ಎಂದು ಹೇಳುವಾಗ ಇದು ಅವಳ ದುರ್ನಡತೆಯ ಫಲವೆಂದು ಸಮಾಜ ಹೇಳುತ್ತದೆ. ಅದರೆ ಪುರುಷರ ವಿಷಯ ಮುಂದೆ ಬರುವಾಗ ಹೆಮ್ಮೆಯ ಯಾವುದೊ ಒಂದು ಕೆಲಸ ಇದೆಂದು ಅಭಿಪ್ರಾಯ ವ್ಯಕ್ತಪಡಿಸಲಾಗುತ್ತದೆ. ಇದು ಹೇಗೆ ಸರಿ ಎಂದು ಬಚ್ಚನ್ ಪ್ರಶ್ನಿಸಿದರು.
ನಮ್ಮ ಊರಿನಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಳಗೊಳ್ಳುತ್ತಿದೆ. ಇಂತಹ ಸುದ್ದಿಗಳನ್ನು ಕೇಳುವಾಗ ಹೃದಯ ಭೇದಿಸಿದಂತೆ ಆಗುತ್ತದೆ. ಅನಿರುದ್ಧ್ ರಾಯ್ ಚೌಧರಿ ನಿರ್ದೇಶನದ ಪಿಂಕ್ ಸಿನೆಮಾ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಬಚ್ಚನ್ ಇದರಲ್ಲಿ ಒಬ್ಬ ವಕೀಲರ ಪಾತ್ರವನ್ನು ವಹಿಸಿದ್ದಾರೆ ಎಂದು ವರದಿ ತಿಳಿಸಿದೆ.