×
Ad

ಪೆರ್ನೆ: ಬೈಕ್‌ಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ; ಸವಾರ ಮೃತ್ಯು

Update: 2016-09-19 17:23 IST

ಉಪ್ಪಿನಂಗಡಿ, ಸೆ.19: ಅನಿಲ ಸಾಗಾಟದ ಟ್ಯಾಂಕರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಪೆರ್ನೆ ಬಳಿಯ ಅಮೈ ಸೇತುವೆ ಬಳಿ ಸೋಮವಾರ ನಡೆದಿದೆ.

ಉಪ್ಪಿನಂಗಡಿ ಗ್ರಾಮದ ಮಠದ ಹಿರ್ತಡ್ಕ ಜನತಾ ಕಾಲನಿ ನಿವಾಸಿ ಮುಸ್ತಫಾ ಯಾನೆ ಪುತ್ತು (35) ಮೃತ ದುರ್ದೈವಿ.

ಮಾಣಿಯಿಂದ ಉಪ್ಪಿನಂಗಡಿ ಕಡೆ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಕಡೇಶಿವಾಲಯ ಗ್ರಾಮದ ಅಮೈ ಸೇತುವೆ ಬಳಿ ಇವರಿದ್ದ ಬೈಕ್‌ಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಅನಿಲ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಮುಸ್ತಫಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News