ಸೈಕಲ್ ಸವಾರನನ್ನು ಉಳಿಸುವ ಭರದಲ್ಲಿ ನದಿಗುರುಳಿದ ಬಸ್ : 50 ಮಂದಿ ಬಲಿ ?
ಮೋತಿಹಾರಿ,ಸೆಪ್ಟಂಬರ್ 19: ಬೇನಿಪಟ್ಟಿ ಯಿಂದ ಸೀತಾಮಡಿಗೆ ಹೋಗುತ್ತಿದ್ದ ಬಸ್‌ವೊಂದು ಸೋಮವಾರ ಮಧ್ಯಾಹ್ನ ಹನ್ನೆರಡು ಗಂಟೆವೇಳೆಗೆ ಸರೋವರಕ್ಕೆ ಬಿದ್ದಿದೆ ಎಂದು ವರದಿಯಾಗಿದೆ. ಬಸ್‌ನಲ್ಲಿ ಅರುವತ್ತಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಐವತ್ತು ಮಂದಿ ಮೃತರಾಗಿದ್ದಾರೆಂದು ಶಂಕಿಸಲಾಗಿದೆ. ಸದ್ಯ ಬಸ್‌ನಲ್ಲಿದ್ದ ಓರ್ವ ಮಹಿಳೆಯ ಮೃತದೇಹವನ್ನು ಮಾತ್ರ ಮೇಲೆತ್ತಲಾಗಿದೆ. ಉಳಿದವರು ಬಸ್‌ನೊಳಗೆ ಸಿಲುಕಿರಬಹುದೆಂದು ಅಂದಾಜಿಸಲಾಗಿದೆ.
ದುರ್ಘಟನೆಯ ವಿವರ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕ್ರೇನ್‌ನ ಸಹಾಯದಿಂದಬಸ್‌ನ್ನು ಸರೋವರದಿಂದ ಹೊರಗೆತ್ತುವ ಪ್ರಯತ್ನ ನಡೆಸಲಾಗುತ್ತಿದೆ. ದುರ್ಘಟನೆ ಬಸೈಟ್ ಪಂಚಾಯತ್‌ಗೊಳಪಟ್ಟ ಕನ್ಹೌಲಿ ಗ್ರಾಮದ ಸಮೀಪ ನಡೆದಿದೆ ಎನ್ನಲಾಗಿದೆ. ಓರ್ವ ಸೈಕಲ್ ಸವಾರನನ್ನು ರಕ್ಷಿಸುವ ಪ್ರಯತ್ನದಲ್ಲಿ ಬಸ್ ರಸ್ತೆಯ ಬದಿಯಲ್ಲಿದ್ದ ಸರೋವರಕ್ಕೆ ಹೋಗಿ ಬಿದ್ದಿದೆ. ಇದು ಖಡ್ಡೂ ಧೌಂಸ್ ನದಿಯ ಹಳೆಯ ಕವಲಾಗಿದ್ದು. ಈಗ ಇದು ನದಿಯ ಮುಖ್ಯಧಾರೆಯನ್ನು ಸೇರದೆ ಸರೋವರದ ರೂಪದಲ್ಲಿ ಉಳಿದುಕೊಂಡಿದೆ. ಘಟನಾಸ್ಥಳದ ಸಮೀಪದಲ್ಲಿ ಜನರದಟ್ಟಣೆ ಆಗಿದೆ. ದುರ್ಘಟನೆಯಲ್ಲಿಮೃತರಾದವರ ಅಧಿಕೃತ ಸಂಖ್ಯೆ ಸದ್ಯದೃಢೀಕರಣವಾಗಿಲ್ಲ ಎಂದು ವರದಿ ತಿಳಿಸಿದೆ.