ಉನ್ನತ ಶಿಕ್ಷಣ ಸಚಿವರಿಗೆ ಮಂಗಳೂರಿನಲ್ಲಿ ವಿನೂತನ ಕಾರು!

Update: 2016-09-19 13:48 GMT

ಮಂಗಳೂರಿಗೆ ಸೋಮವಾರ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ವಿನೂತನ ಕಾರಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿತು. ಅದು ವಿಶೇಷ ಹೈಬ್ರಿಡ್ ಕಾರು ! ಈ ಅವಕಾಶ ಸಿಕ್ಕಿದ್ದು ಮಂಗಳೂರಿನ ಇನೋಳಿಯಲ್ಲಿರುವ ಬ್ಯಾರೀಸ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ರೂಪಿಸಿರುವ ಈ ವಿಶೇಷ ಹೈಬ್ರಿಡ್ ಕಾರು ಎರಡು ರೀತಿಯ ಇಂಧನ ಬಳಸುವಂತೆ ರೂಪಿಸಲಾಗಿದೆ. ಸಾಂಪ್ರದಾಯಿಕ ಇಂಧನದ ಜೊತೆ ನೀರನ್ನೂ ಇಂಧನವಾಗಿ ಬಳಸಲು ಸಾಧ್ಯವಾಗುವಂತೆ ಈ ಕಾರಿನ ಇಂಜಿನನ್ನು ವಿಶೇಷವಾಗಿ ಮಾರ್ಪಾಡು ಮಾಡಲಾಗಿದೆ. ಜೊತೆಗೆ ಹೆಚ್ಚು ಮೈಲೇಜ್ ಕೂಡಾ ಪಡೆಯುವ ಮೂಲಕ ಜನಸಾಮಾನ್ಯರಿಗೆ ನೆರವಾಗುವ ಉದ್ದೇಶ ಈ ಕಾರ್ ನಲ್ಲಿದೆ.

ಸೋಮವಾರ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಲಾದ ಸೈನ್ಸ್ ಎಂಡ್ ಟೆಕ್ನಾಲಜಿ ಪಾರ್ಕ್ ( ಸ್ಟೆಪ್ ) ಉದ್ಘಾಟನೆ ಮಾಡಲು ಕಾಲೇಜಿಗೆ ಬಂದಿದ್ದ ಉನ್ನತ ಶಿಕ್ಷಣ ಸಚಿವರು ಈ ನೂತನ ಕಾರಿನಲ್ಲಿ ಕಾಲೇಜು ಕ್ಯಾಮ್ಪಸ್ ಗೆ ಒಂದು ಸುತ್ತು ಹಾಕಿದರು. ವಿದ್ಯಾರ್ಥಿಗಳ ಈ ಹೊಸ ಸಂಶೋಧನೆಗೆ ಸಚಿವರು ಅಭಿನಂದನೆ ಸಲ್ಲಿಸಿದರು.  


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News