ಮಿಲ್ಲತ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಮಹಾಸಭೆ
Update: 2016-09-19 20:39 IST
ಮಂಗಳೂರು, ಸೆ.19: ನಗರದ ಅಝೀಝುದ್ದೀನ್ ರಸ್ತೆಯಲ್ಲಿರುವ ಮಿಲ್ಲತ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೆ ಮಹಾಸಭೆಯು ರವಿವಾರ ಮುಸ್ಲಿಂ ಸೆಂಟ್ರಲ್ ಕಮಿಟಿ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಮಾಜಿ ರಾಜ್ಯಸಭಾ ಸದಸ್ಯ ಹಾಜಿ ಬಿ.ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು. ಸಂಘವು ಪ್ರಸಕ್ತ ವರ್ಷದಲ್ಲಿ 10,50,580 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಲಾಭಾಂಶ ಘೋಷಿಸಲಾಗಿದೆ.
ಸಭೆಯಲ್ಲಿ ಉಪನಿಬಂಧನೆಯನ್ನು ತಿದ್ದುಪಡಿ ಮಾಡಲು ತೀರ್ಮಾನಿಸಲಾಯಿತು. ಜೋಕಟ್ಟೆ ಮತ್ತು ಮುಲ್ಕಿಯಲ್ಲಿ ಶಾಖೆಗಳನ್ನು ತೆರೆಯುವ ಬಗ್ಗೆ ತೀರ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಶೆರಿನ್ ಬಾನು ವರದಿ ವಾಚಿಸಿದರು. ಉಪಾಧ್ಯಕ್ಷ ಅಝೀಝ್ ಸ್ವಾಗತಿಸಿದರು. ನಿರ್ದೇಶಕ ಪುಷ್ಪರಾಜ್ ವಂದಿಸಿದರು.