ನಿರಂಜನ್ ಭಟ್ ಮತ್ತೆ ಪೊಲೀಸ್ ಕಸ್ಟಡಿಗೆ

Update: 2016-09-19 15:24 GMT

ಉಡುಪಿ, ಸೆ.19: ಕಳೆದ ನಾಲ್ಕು ದಿನಗಳಿಂದ ಸಿಐಡಿ ಪೊಲೀಸ್ ಕಸ್ಟಡಿಯಲ್ಲಿರುವ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ್ ಭಟ್‌ನನ್ನು ಮತ್ತೆ ಮೂರನೇ ಬಾರಿಗೆ ಎರಡು ದಿನಗಳ ಸಿಐಡಿ ಪೊಲೀಸರ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯವು ಆದೇಶ ನೀಡಿದೆ.

ಸೆ.15ರಿಂದ ನಾಲ್ಕು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದ ನಿರಂಜನ್ ಭಟ್‌ನನ್ನು ಇಂದು ಸಂಜೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಹಾಜರುಪಡಿಸಿದರು.

ಈ ಸಂದರ್ಭ ಪ್ರಕರಣದ ತನಿಖಾಧಿಕಾರಿ ಚಂದ್ರಶೇಖರ್, ಆರೋಪಿ ಯನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಈಗಾಗಲೇ ಪೊಲೀಸ್ ಕಸ್ಟಡಿಗೆ ನೀಡಿ ರುವ ನವನೀತ್ ಶೆಟ್ಟಿ ಜೊತೆ ನಿರಂಜನ್ ಭಟ್‌ನನ್ನು ವಿಚಾರಣೆಗೆ ಒಳ ಪಡಿಸಬೇಕಾಗಿದ್ದು, ಆದುದರಿಂದ ಆತನನ್ನು ಪೊಲೀಸ ಕಸ್ಟಡಿಗೆ ಒಪ್ಪಿಸಬೇಕು ಎಂದು ವಾದಿಸಿದರು.

ಇದಕ್ಕೆ ಆರೋಪಿ ಪರ ವಕೀಲ ವೈ.ವಿಕ್ರಂ ಹೆಗ್ಡೆ ಆಕ್ಷೇಪ ಸಲ್ಲಿಸಿ, ಆರೋಪಿ ಯನ್ನು ಈಗಾಗಲೇ ನಾಲ್ಕು ದಿನ ಸಿಐಡಿ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಹೀಗೆ ನಿರಂತರ ಪೊಲೀಸ್ ಕಸ್ಟಡಿಗೆ ಕೇಳುವುದು ಸರಿಯಲ್ಲ ಎಂದು ಹೇಳಿ ದರು. ಈ ಬಗ್ಗೆ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ನಿರಂಜನ್ ಭಟ್ ನನ್ನು ಮತ್ತೆ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ನವನೀತ್ ಜೊತೆ ಸೆ.21ರಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಿ ದರು. ಅಲ್ಲದೆ ಆರೋಪಿಗೆ ಅಗತ್ಯ ಇದ್ದರೆ ವೈದ್ಯಕೀಯ ತಪಾಸಣೆಗೆ ಒಳಪಡಿ ಸಬೇಕು ಎಂದು ಸೂಚಿಸಿದರು.

ಮತ್ತೆ ಆಗಮಿಸಲಿರುವ ಸಿಐಡಿ ಅಧಿಕಾರಿಗಳು

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಇನ್ನು ತಾರ್ತಿಕ ಅಂತ್ಯ ಕಾಣದ ಹಿನ್ನೆಲೆ ಯಲ್ಲಿ ಪೊಲೀಸರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುತ್ತಿ ರುವ ಮಧ್ಯೆ ಮತ್ತೆ ಸಿಐಡಿ ಹಿರಿಯ ಅಧಿಕಾರಿಗಳು ಉಡುಪಿಗೆ ಆಗಮಿಸ ಲಿರುವರು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಉಡುಪಿಯಲ್ಲಿ ಬೀಡುಬಿಟ್ಟಿರುವ ಸಿಐಡಿ ಎಸ್ಪಿ ಐ. ಮಾರ್ಟಿನ್ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಪ್ರಕರಣ ನಡೆದ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಾಗಿರುವುದರಿಂದ ತನಿಖೆಯನ್ನು ತೀವ್ರಗೊಳಿಸಲು ಸಿಐಡಿ ಡಿಐಜಿ ಸೋನಿಯಾ ನಾರಂಗ್ ಸದ್ಯವೇ ಉಡುಪಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News