×
Ad

ಬಾಳಿಗಾ ಹತ್ಯೆ ಪ್ರಕರಣದ ಆರೋಪಿ ನರೇಶ್ ಶೆಣೈ ಬಿಡುಗಡೆ

Update: 2016-09-19 21:55 IST

ಮಂಗಳೂರು, ಸೆ. 19: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ನಮೋ ಬ್ರಿಗೇಡ್‌ನ ಸ್ಥಾಪಕ ನರೇಶ್‌ಶೆಣೈ ಸೋಮವಾರ ಸಂಜೆ ಬಿಡುಗಡೆಗೊಂಡಿದ್ದಾರೆ.

ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ ಗುರುವಾರ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಜೈಲು ಅಧೀಕ್ಷಕರಿಗೆ ಬಿಡುಗಡೆಯ ಆದೇಶಪತ್ರ ತಲುಪಿರಲಿಲ್ಲ. ಅಲ್ಲದೆ, ರವಿವಾರ ಸರಕಾರಿ ರಜೆ ಇದ್ದುದರಿಂದ ಬಿಡುಗಡೆ ವಿಳಂಬವಾಗಿತ್ತು. ಸೋಮವಾರ ಸಂಜೆ ಆದೇಶ ಪತ್ರ ಜೈಲು ಅಧೀಕ್ಷಕರಿಗೆ ತಲುಪಿದ್ದರಿಂದ ಶೆಣೈಯನ್ನು ಬಿಡುಗಡೆಗೊಳಿಸಲಾಯಿತು.

2 ಲಕ್ಷ ರೂ. ಶ್ಯೂರಿಟಿ, ಸಾಕ್ಷ ನಾಶ ಮಾಡಬಾರದು, ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಬೇಕು ಸಹಿತ ಇತರ ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಆರೋಪಿ ನರೇಶ್ ಶೆಣೈಗೆ ಜಾಮೀನು ಮಂಜೂರು ಮಾಡಿತ್ತು.

ಬರಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ, ಹನುಮಂತ ಕಾಮತ್

ಹತ್ಯಾ ಆರೋಪಿ ನರೇಶ್ ಶೆಣೈ ಜೈಲಿನಿಂದ ಹೊರಬರುತ್ತಿದ್ದಂತೆ ಅವರನ್ನು ಬರಮಾಡಿಕೊಳ್ಳಲು ಚಕ್ರವರ್ತಿ ಸೂಲಿಬೆಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್ ಸಹಿತ ಇತರರು ನರೇಶ್ ಶೆಣೈಯನ್ನು ಬರಮಾಡಿಕೊಂಡರು. ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಜೈಲು ಆವರಣದ ಒಳಗಡೆ ಹೋಗಿದ್ದರೆ, ಹನುಮಂತ ಕಾಮತ್ ಜೈಲು ಆವರಣದ ಎದುರು ಉಪಸ್ಥಿತರಿದ್ದರು. ಅನಂತರ ಅವರನ್ನು ಕಾರಿನಲ್ಲಿ ಕರೆದೊಯ್ಯಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News