ಮಂಗಳೂರು ನಗರ ಪೊಲೀಸ್ ಇಲಾಖೆಯ 21 ಮಂದಿಗೆ ಮುಂಭಡ್ತಿ

Update: 2016-09-19 18:07 GMT

ಮಂಗಳೂರು, ಸೆ. 19: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ 21 ಮಂದಿಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಮುಂಭಡ್ತಿ ನೀಡಲಾಗಿದೆ.

ಯೋಗೀಶ್ (ಸಂಚಾರ ಉತ್ತರ), ರಾಜರಾಮ (ಬಜ್ಪೆ), ಚಂದ್ರಶೇಖರಯ್ಯ (ಮುಲ್ಕಿ), ಎಸ್.ಎಂ.ರುದ್ರಪ್ಪ (ಸಂಚಾರ ದಕ್ಷಿಣ), ಚಂದ್ರ ಎಎಸ್ಸೈ (ಸಂಚಾರ ದಕ್ಷಿಣ), ಪ್ರಕಾಶ್ ಕುಮಾರ್ (ಬರ್ಕೆ), ಕುಶಾಲಪ್ಪ ಗೌಡ (ಮೂಡುಬಿದಿರೆ), ಶಂಕರ್ ನಾಯರಿ (ಮಂಗಳೂರು ಪೂರ್ವ), ನರೇಂದ್ರ (ಬರ್ಕೆ), ಯೋಗೇಶ್ವರನ್ (ಮಹಿಳಾ ಠಾಣೆ), ಹರೀಶ್ ಎಚ್.ವಿ. (ಗ್ರಾಮಾಂತರ), ಕೃಷ್ಣ ಬಿ. (ಉರ್ವ), ಶಂಕರ ಪಾಟಾಳಿ (ಕಂಕನಾಡಿ), ರೋಸಮ್ಮ (ಕಾವೂರು), ಸುಂದರಿ (ಪಣಂಬೂರು), ಕಮಲಾ (ಕೇಂದ್ರ ಅಪರಾಧ), ಮೋಹನ್‌ದಾಸ್ (ಉಳ್ಳಾಲ), ಕಮಾರೇಶನ್ (ಪಣಂಬೂರು), ಲತಾ ಕೆ.ಎನ್. (ಉತ್ತರ-ಅಪರಾಧ), ಅಮ್ಮಣ್ಣಿ (ಸಿ.ಸಿ.ಆರ್.ಬಿ), ಶ್ರೀಕಲಾ ಕೆ.ಟಿ (ಕೊಣಾಜೆ) ಇವರಿಗೆ ಮುಂಭಡ್ತಿ ನೀಡಿ, ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.

ಅಲ್ಲದೆ, ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ 22 ಮಂದಿಗೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಆಗಿಯೂ, ಪೊಲೀಸ್ ಹೆಡ್ ಕಾನ್ಸ್‌ಟೇಬಲ್ (ಸಶಸ) ಸೇವೆ ಮಾಡುತ್ತಿದ್ದ 6 ಮಂದಿಗೆ ರಿಸರ್ವ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಮುಂಭಡ್ತಿ ದೊರೆತಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News